Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಪೊಲೀಸರು ಮೂಲಮಠ ಬಿಟ್ಟುಕೊಟ್ಟ ಬಳಿಕ...

'ಪೊಲೀಸರು ಮೂಲಮಠ ಬಿಟ್ಟುಕೊಟ್ಟ ಬಳಿಕ ಶಿರೂರು ಶ್ರೀ ಆರಾಧನೆ'

ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ಹೇಳಿಕೆ

ವಾರ್ತಾಭಾರತಿವಾರ್ತಾಭಾರತಿ27 July 2018 10:03 PM IST
share
ಪೊಲೀಸರು ಮೂಲಮಠ ಬಿಟ್ಟುಕೊಟ್ಟ ಬಳಿಕ ಶಿರೂರು ಶ್ರೀ ಆರಾಧನೆ

ಉಡುಪಿ, ಜು.27: ಈಗ ಪೊಲೀಸರ ಸುಪರ್ದಿಯಲ್ಲಿರುವ ಶಿರೂರು ಮೂಲ ಮಠವನ್ನು ಪೊಲೀಸರು ಹಿಂದಿರುಗಿಸಿದ ಬಳಿಕವಷ್ಟೇ ಹಿರಿಯಡ್ಕದ ಸಮೀಪದಲ್ಲಿರುವ ಶೀರೂರು ಮೂಲ ಮಠದಲ್ಲಿ ಜು.19ರಂದು ನಿಧನರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಆರಾಧನೆ ನಡೆಸಲಾಗುವುದು ಎಂದು ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹೇಳಿದ್ದಾರೆ.

ಶುಕ್ರವಾರ ಸೋದೆ ಮಠದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13ನೇ ದಿನವಾದ ಜು.31ರಂದು ಶಿರೂರು ಶ್ರೀಗಳ ಆರಾಧನೆಗೆ ನಾವು ಉದ್ದೇಶಿಸಿದ್ದೆವು. ಆದರೆ ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು ಅದನ್ನು ಪೂರ್ಣಗೊಳಿಸಿ ಮಠವನ್ನು ನಮ್ಮ ವಶಕ್ಕೆ ಒಪ್ಪಿಸಿದ ಬಳಿಕವಷ್ಟೇ ಆರಾಧನೆ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುವುದು ಎಂದರು.

ತನಿಖೆ ಪೂರ್ಣಗೊಳಿಸಿ ಇಂದು ಸಂಜೆ ವೇಳೆ ಮಠವನ್ನು ಬಿಟ್ಟುಕೊಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದರು. ಬಿಟ್ಟುಕೊಟ್ಟರೆ, ಆರಾಧನೆಗೆ ಸಾಂಪ್ರದಾಯಿಕವಾಗಿ ಏನೇನು ನಡೆಯಬೇಕೊ ಅದನ್ನು ಮಾಡುತ್ತೇವೆ. ಆದರೆ ಪೊಲೀಸರು ಮಠವನ್ನು ಬಿಟ್ಟುಕೊಡದೇ ಏನೂ ಮಾಡುವಂತಿಲ್ಲ. 13ನೇ ದಿನಕ್ಕೆ ಆರಾಧನೆ ಹಾಗೂ ಸಂತರ್ಪಣೆ ನಡೆಯಲಿದ್ದು, ಒಂದು ವರ್ಷದ ಬಳಿಕ ವೃಂದಾವನ ಪ್ರತಿಷ್ಠಾಪನೆ ನಡೆಯಲಿದೆ ಎಂದು ಸೋದೆ ಶ್ರೀ ನುಡಿದರು.

ತನಿಖೆಗೆ ಸಹಕಾರ

ಮೂರು ದಿನಗಳಿಗಾಗಿ ಪೊಲೀಸರು ಮೂಲ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಈಗಾಗಲೇ ಒಂದು ವಾರ ಕಳೆದಿದೆ. ತನಿಖೆಗೆ ತೊಂದರೆ ಯಾಗಬಾರದು. ಮಠ ಒಪ್ಪಿಸದಿದ್ದರೆ ಸಂಪ್ರದಾಯ ಪ್ರಕಾರ ಅಡುಗೆ, ಪೂಜೆ, ಹೋಮ ನಡೆಸುವುದು ಕಷ್ಟ. ಮಠ ಪೊಲೀಸರ ವಶದಲ್ಲಿದ್ದರೂ ನಿತ್ಯ ಪೂಜೆ ಸಾಂಗವಾಗಿ ನಡೆಯುತ್ತಿದ್ದು, ಭಕ್ತರಿಗೆ ಯಾರಿಗೂ ಪ್ರವೇಶವಿಲ್ಲ. ಮೂಲಮಠದಲ್ಲಿ ಪ್ರತಿ ಶನಿವಾರ ನಡೆಯುವ ವಿಶೇಷ ರಂಗಪೂಜೆ ನಾಳೆಯೂ ನಡೆಯಲಿದೆ ಎಂದರು.

ಐವರು ಸದಸ್ಯರ ಸಮಿತಿ

ಶಿರೂರು ಮಠಕ್ಕೆ ಉತ್ತರಾಧಿಕಾರಿಯ ನೇಮಕವಾಗುವವರೆಗೆ ಉಡುಪಿ ರಥಬೀದಿಯಲ್ಲಿರುವ ಶಿರೂರು ಮಠ ಹಾಗೂ ಹಿರಿಯಡ್ಕ ಶಿರೂರು ಮೂಲ ಮಠಕ್ಕೆ ಇಬ್ಬರನ್ನು ಉಸ್ತುವಾರಿಗಳಾಗಿ ನಿಯೋಜಿಸಿದ್ದು, ಪೊಲೀಸ್ ತನಿಖೆ ಸಹಿತ ಮಠದ ನಿತ್ಯ ವ್ಯವಹಾರದಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಶಿರೂರು ಮಠದ ಬಗ್ಗೆ ಸಂಪೂರ್ಣ ಅರಿವಿದ್ದವರನ್ನೇ ಮಠದ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಸೋದೆ ಶ್ರೀ ಉತ್ತರಿಸಿದರು.

ಮುಂದೆ ಮಠದ ಆಸ್ತಿಪಾಸ್ತಿಗಳ ಉಸ್ತುವಾರಿ, ಹಣಕಾಸು ಹಾಗೂ ಇತರ ವ್ಯವಹಾರಗಳ ನಿರ್ವಹಣೆಗಾಗಿ ಐದು ಜನರ ಸಮಿತಿಯೊಂದರ ರಚನೆಗೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. ಇದರಲ್ಲಿ ಶಿರೂರು ಮಠದ ಪ್ರತಿನಿಧಿಗಳೂ ಇರಲಿದ್ದಾರೆ ಎಂದರು.

ಉತ್ತರಾಧಿಕಾರಿಗೆ ಹುಡುಕಾಟ

ಶಿರೂರು ಮಠದ ಉತ್ತರಾಧಿಕಾರಿಗಾಗಿ ಸೂಕ್ತ, ಅರ್ಹ ವಟುವಿಗಾಗಿ ಹುಡುಕಾಟ ನಡೆದಿದೆ. 18 ವರ್ಷ ತುಂಬಿದ, ಸನ್ಯಾಸತ್ವಕ್ಕೆ ಯೋಗ್ಯತೆ, ಅರ್ಹತೆಯುಳ್ಳ ಉತ್ತಮ ವ್ಯಕ್ತಿತ್ವದವರನ್ನು ಶಿಷ್ಯ ಸ್ವೀಕಾರಕ್ಕಾಗಿ ಹುಡುಕುತ್ತಿದ್ದೇವೆ. ಯೋಗ್ಯರು ಸಿಕ್ಕರೆ ಇಂದೇ ಬೇಕಿದ್ದರೂ ಶಿಷ್ಯ ಸ್ವೀಕಾರಕ್ಕೆ ಸಿದ್ಧ. ಹುಡುಕಿದರೆ ಒಳ್ಳೆಯ ವಟು ಸಿಕ್ಕೇಸಿಕ್ಕುತ್ತಾರೆ ಎಂದ ಶ್ರೀ ವಿಶ್ವವಲ್ಲಭ ತೀರ್ಥರು, ಶಿರೂರುಶ್ರೀಗಳು ಯಾರನ್ನಾದರೂ ಶಿಷ್ಯತ್ವಕ್ಕೆ ಆಯ್ಕೆ ಮಾಡಿದ್ದಾರೋ ಗೊತ್ತಿಲ್ಲ. ಅಂಥವರು ಯಾರೂ ಈವರೆಗೆ ನಮ್ಮನ್ನು ಭೇಟಿಯಾಗಿಲ್ಲ ಎಂದರು.

ಶಿರೂರು ಮಠ ಅನಾಥವಾಗಿಲ್ಲ

ಶಿಷ್ಯ ಸ್ವೀಕಾರ ಮಾಡದೇ ಶಿರೂರುಶ್ರೀ ಗಳು ನಿಧನರಾಗಿರುವುದರಿಂದ ಶಿರೂರು ಮಠ ಅನಾಥವಾಗಿಲ್ಲ. ಶ್ರೀ ಮಧ್ವಾಚಾರ್ಯರು ಮಾಡಿಟ್ಟ ದ್ವಂದ್ವ ಮಠ ಪರಂಪರೆಯಿಂದಾಗಿ ಶಿರೂರು ಮಠದ ನಿರ್ವಹಣೆಯನ್ನು ಸೋದೆ ಮಠ ತಕ್ಷಣದಿಂದ ನೋಡಿಕೊಳ್ಳುತ್ತಿದೆ. ಮುಂದೆ ಮಠಕ್ಕೆ ಶಿಷ್ಯ ಸ್ವೀಕಾರದ ಬಳಿಕ ಅದನ್ನು ಅವರಿಗೆ ಒಪ್ಪಿಸಲಿದೆ. ಈಗ ನಮಗೆ ಉಳಿದೆಲ್ಲಾ ಮಠಗಳ ಸಂಪೂರ್ಣ ಸಹಕಾರ, ಪ್ರೋತ್ಸಾಹ ದೊಕುತ್ತಿದೆ ಎಂದವರು ವಿವರಿಸಿದರು.

ಶಿರೂರು ಮಠದ ಲೆಡ್ಜರ್ ನಾಪತ್ತೆ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಡಿವಿಆರ್ ನಾಪತ್ತೆ ವಿಷಯ ಪೊಲೀಸರು ಮಾಹಿತಿ ನೀಡಿದ ಬಳಿಕವಷ್ಟೇ ಗೊತ್ತಾಗಿದೆ. ಶಿರೂರು ಶ್ರೀಗಳ ಮೈಮೇಲಿದ್ದ ಆಭರಣ ಮಠಕ್ಕೆ ಬಂದಿಲ್ಲ . ಅವು ಪೊಲೀಸರ ಸುಪರ್ದಿಯಲ್ಲಿವೆ. ಶಿರೂರುಶ್ರೀಗಳ ನಾನಾ ಯೋಜನೆ, ಘೋಷಣೆ ಜಾರಿಗೆ ಮಠದ ಆರ್ಥಿಕ ಪರಿಸ್ಥಿತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶಿರೂರು ಮಠದ ಆಸ್ತಿಪಾಸ್ತಿ ದಾಖಲೆ ಕಾನೂನು ಪ್ರಕಾರ ಮುಂದುವರಿಯಲಿದೆ. ಶಿಷ್ಯ ಸ್ವೀಕಾರದ ಬಳಿಕ ಎಲ್ಲದಕ್ಕೂ ಉತ್ತರಾಧಿಕಾರಿಗೇ ಹೊಣೆಗಾರರಾಗುತ್ತಾರೆ ಎಂದರು.

ಎಸ್ಪಿ ಅನುಮತಿ ಕೊಟ್ಟರೆ ಶಿರೂರುಶ್ರೀಗಳ ಆರಾಧನೆ ನಡೆಯುತ್ತದೆ. ಕೊಡದಿದ್ದರೆ ‘ದೈವಚಿತ್ತ’. ಪೊಲೀಸರ ತನಿಖೆಗೆ ಮಠದ ವತಿಯಿಂದ ಸಂಪೂರ್ಣ ಸಹಕಾರ ನೀಡುತಿದ್ದೇವೆ.

-ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ.

ದೃಶ್ಯಮಾದ್ಯಮಗಳ ವರದಿಗೆ ಸೋದೆ ಶ್ರೀ ಅಸಮಧಾನ

ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥರು ನಿಗೂಢ ಸಾವಿನ ಬಳಿಕ ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿರುವ ಬ್ರೇಕಿಂಗ್ ನ್ಯೂಸ್, ವರದಿ, ವಿಶೇಷ ಚರ್ಚೆಗಳ ಕುರಿತಂತೆ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು  ತೀವ್ರ ಅಸಮಧಾನ ವ್ಯಕ್ತಪಡಿಸಿದರು.

 ಶ್ರೀಲಕ್ಷ್ಮೀವರತೀರ್ಥರ ಸಾವಿಗೆ ಉಳಿದ ಅಷ್ಟಮಠಗಳ ಯತಿ ಗಳನ್ನು ಗುರಿಯಾಗಿಸಿಕೊಂಡು ವರದಿ ಮಾಡಿರುವುದು ತಮಗೆ ತುಂಬಾ ಬೇಸರ ಉಂಟು ಮಾಡಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ನುಡಿದರಲ್ಲದೇ, ಇಂದು ದೃಶ್ಯ ಮಾಧ್ಯಮದ ವರದಿಗಾರರಿಗೆ ಯಾವುದೇ ಬೈಟ್ ನೀಡಲು ನಿರಾಕರಿಸಿದರು.

ನಮಗೆ ಪ್ರಚಾರ ಬೇಕಾಗಿಲ್ಲ. ಪ್ರಚಾರದ ಗೀಳೂ ನಮಗಿಲ್ಲ. ಆದರೆ ಅಲ್ಲಿ ನುಡಿದ ಕೆಟ್ಟ ಮಾತು ಕೇಳಲಾಗದು. ಅನ್ಯಾಯ ಮಾಡಿದ್ದರೆ ಸಹಿಸ ಬಹುದು, ಅನ್ಯಾಯವೇ ಮಾಡದಿದ್ದರೆ ಅಪವಾದ ಎದುರಿಸುವುದು ಹೇಗೆ ? ಇಲ್ಲ ಸಲ್ಲದ್ದನ್ನು ಕೇಳುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಕಳೆದ ಕೆಲವು ದಿನಗಳಿಂದ ಇಷ್ಟೆಲ್ಲಾ ನೋಡಿ, ಕೇಳಿದ ಮೇಲೆ ಇನ್ನೂ ಟಿವಿ ಡಿಬೆಟ್‌ಗೆ ಆಹಾರವಾಗಲು ನನಗೆ ಆಸಕ್ತಿ ಇಲ್ಲ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X