ಉಡುಪಿ: ತಾಯಿ, ಮಕ್ಕಳು ನಾಪತ್ತೆ

ಉಡುಪಿ, ಜು.27: ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಜು. 25ರಂದು ಮಧ್ಯಾಹ್ನ ಪುತ್ತೂರು ಗ್ರಾಮದ ಅಂಬೇಡ್ಕರ್ ರಸ್ತೆ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಅಂಬೇಡ್ಕರ್ ರಸ್ತೆ ನಿವಾಸಿ ಶೇಖರ್ ಎಂಬವರ ಮಗಳು ಆಶಾ (28) ಹಾಗೂ ಮಕ್ಕಳಾದ ಕಾವ್ಯ (7) ಮತ್ತು ರಾಹುಲ್ (6) ಎಂದು ಗುರುತಿಸಲಾಗಿದೆ. ಆಶಾ ಜು.25ರಂದು ಮಧ್ಯಾಹ್ನ 2ಗಂಟೆಗೆ ತಾನು ಕೆಲಸ ಮಾಡಿಕೊಂಡಿರುವ ಗುಂಡಿಬೈಲ್ ತಾಂಗದಗಡಿಯ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು.
ಅಲ್ಲಿಂದ ಅವರು ಮಧ್ಯಾಹ್ನ 3:45 ಗಂಟೆಗೆ ಹನುಮಂತ ನಗರ ಶಾಲೆಯಲ್ಲಿ ಕಲಿಯುತ್ತಿದ್ದ ತನ್ನ ಇಬ್ಬರು ಮಕ್ಕಳಾದ ಕಾವ್ಯ ಮತ್ತು ರಾಹುಲ್ರವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋದವರು ಮನೆಗೆ ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





