ಉಡುಪಿ: ಬೋರ್ಡ್ ಹೈಸ್ಕೂಲ್‌ನಲ್ಲಿ ಕಳವು
ಉಡುಪಿ, ಜು.27: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಬೋರ್ಡ್ ಹೈಸ್ಕೂಲ್‌ಗೆ ನುಗ್ಗಿದ ಕಳ್ಳರು ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಜು.19ರಿಂದ ಜು.23ರ ಮಧ್ಯಾವಧಿಯಲ್ಲಿ ಈ ಕಳವು ನಡೆದಿದೆ. ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕಳ್ಳರು ಕೋಣೆಯಲ್ಲಿದ್ದ ಮೂರು ಮೊನಿಟರ್, ಆರು ತಿನ್ ಕ್ಲೈಂಟ್, ಐದು ಮೌಸ್, ಒಂದು ಕ್ಯಾಮೆರಾಗಳನ್ನು ಕಳವು ಮಾಡಿ ದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 10,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





