ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಮೆಹುಲ್ ಚೋಕ್ಸಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಹೊಸದಿಲ್ಲಿ, ಜು. 27: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಮೆಹುಲ್ ಚೋಕ್ಸಿ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ. ಸಂಪೂರ್ಣ ಹಗರಣದ ಸಂಚುಗಾರ ಮೆಹುಲ್ ಚೋಕ್ಸಿ ಎಂದು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಅತ್ಯಂತ ದೊಡ್ಡ ಹಗರಣವಾದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದ ಸಂಚುಕೋರ ಮೆಹುಲ್ ಚೋಕ್ಸಿ. ಈ ವಂಚನೆಯ ಸಂಪೂರ್ಣ ಯೋಜನೆ ಹಾಗೂ ಆಮದು ಹಾಗೂ ರಫ್ತು ಅಡಿಯಲ್ಲಿ ಹಣವನ್ನು ಸಾಗಿಸುವುದನ್ನು ಆತ ವಿನ್ಯಾಸಗೊಳಿಸಿದ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಕಂಪೆನಿಗಳು ಮೆಹುಲ್ ಚೋಕ್ಸಿ ಅವರ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದ್ದುವು. ಈ ಕಂಪೆನಿಯ ನಿರ್ದೇಶಕರು ಹಾಗೂ ಪಾಲುದಾರರು ನಕಲಿಗಳಾಗಿದ್ದರು. ಮೆಹುಲ್ ಚೋಕ್ಸಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
Next Story





