ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಿದಾಗ ಪ್ರತ್ಯೇಕತೆ ಕೂಗು ಸಾಮಾನ್ಯ: ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ,ಜು.27: ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಿದಾಗ ಪ್ರತ್ಯೇಕತೆ ಕೂಗು ಸಾಮಾನ್ಯ. ಈ ಹಿನ್ನಲೆಯಲ್ಲಿ ಸರ್ಕಾರ ಶೀಘ್ರ ಹೆಚ್ಚೆತ್ತು ಈ ಭಾಗದ ಜನರಿಗಾಗಿರುವ ಅನ್ಯಾಯ ಸರಿಪಡಿಸಲಿ ಎಂದು ಕೂಡಲಸಂಗದಮ ಲಿಂಗಾಯಿತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಜು. 31ರಂದು ಉತ್ತರ ಕರ್ನಾಟಕ ಸ್ವಾಮಿಜಿಗಳ ಸಭೆ ನಡೆಯಲಿದೆ. ಅಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಹಾಗೂ ಉತ್ತರಕರ್ನಾಟಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚಿಸಲಾಗುವುದು. ಆದ್ದರಿಂದ ಈ ಕೂಗು ಇನ್ನಷ್ಟು ಜಾಸ್ತಿಯಾಗುವ ಮುನ್ನ ಸಂಬಂಧಪಟ್ಟವರು ಎಚ್ಚರಗೊಳ್ಳಬೇಕು ಎಂದರು.
ಬೆಳಗಾವಿ 2ನೇ ರಾಜಧಾನಿಯಾಗಲಿ, 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಬೇಕು. ಸುವರ್ಣಸೌಧದಲ್ಲಿ 2 ತಿಂಗಳಿಗೊಮ್ಮೆ ಸದನವನ್ನು ನಡೆಸಬೇಕು. ಆಗ ಮಾತ್ರ ಪ್ರತ್ಯೇಕತೆ ಕೂಗು ಶಮನಗೊಳ್ಳಲು ಸಾಧ್ಯವೆಂದರು.
Next Story