ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಸಾಮಾನ್ಯ ಜ್ಞಾನ ಶೂನ್ಯ: ಗೋವಿಂದಾಚಾರ್ಯ

ಉಡುಪಿ, ಜು.28: ಇಂದಿನ ಶಿಕ್ಷಣ ವ್ಯವಸ್ಥೆಯು ಮನುಷ್ಯನ ಸಾಮಾನ್ಯ ಜ್ಞಾನವನ್ನು ಶೂನ್ಯಗೊಳಿಸಿ ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡಿದೆ. ಮನುಷ್ಯನು ಸಮಾಜಮುಖಿಯಾದಾಗ ಮಾತ್ರ ಅವನ ಬದುಕು ಸಾರ್ಥಕವಾ ಗುತ್ತದೆ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹೇಳಿದ್ದಾರೆ.
ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ‘ನಿನ್ನನ್ನು ನೀನು ಅರಿತುಕೋ’ ಎಂಬ ಆಧ್ಯಾತ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿ ದ್ದರು.
ಜೀವನದ ಮೂಲ ಉದ್ದೇಶವನ್ನು ಅರಿತು ಅದಕ್ಕೆ ಅನುಗುಣವಾಗಿ ಜ್ಞಾನದ ಹುಡುಕಾಟದಲ್ಲಿ ತೊಡಗಿರುವುದರಲ್ಲಿ ಮಾನವ ಜನ್ಮದ ಸಾರ್ಥಕ್ಯ ಅಡಗಿದೆ. ಭಾರತೀಯ ತತ್ವಶಾಸ್ತ್ರದಲ್ಲಿ ಮನುಷ್ಯ ಜೀವನಕ್ಕೆ ಬೇಕಾದ ಸಮಸ್ತ ಸಾರ ಅಡಗಿದೆ. ಅದರ ಸಮರ್ಪಕ ತಿಳಿವಿನಿಂದ ನಮ್ಮನ್ನು ನಾವು ಅರಿತು ಉಪಯುಕ್ತ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮವನ್ನು ಉಡುಪಿ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ತಿರುು ಲೇಶ್ವರ ಭಟ್ ಸ್ವಾಗತಿಸಿದರು.
ಡಾ.ಪ್ರಸಾದ್ ಕೈಪ ಮಾನವನ ಮೆದುಳಿನ ಬಗ್ಗೆ ಅಮೂಲಾಗ್ರವಾಗಿ ನಡೆದಿ ರುವ ಸಂಶೋಧನೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ವಿದ್ವಾಂಸ ಕರ್ನೂಲು ಶ್ರೀನಿವಾಸ ಆಚಾರ್ಯ, ಅಂತಾರಾಷ್ಟ್ರೀಯ ಯೋಗ ಕೇಂದ್ರದ ಮಹಾ ನಿರ್ದೇಶಕ ಡಾ.ಕೆ.ಕೃಷ್ಣ ಭಟ್, ಸಂಸ್ಕೃತ ವಿದ್ವಾಂಸ ಡಾ.ವ್ಯಾಸನಕೆರೆ ಪ್ರಂಜನ ಆಚಾರ್ಯ, ಶಿಕ್ಷಣ ತಜ್ಞ ಡಾ.ಪಿ.ಆರ್.ಮುಕುಂದ್ ಉಪನ್ಯಾಸ ನೀಡಿದರು. ಬಳಿಕ ಸಂಸ್ಥೆಯ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯ ಕ್ರಮ ನಡೆುತು.







