ಮಡಿಕೇರಿ: ವಿದ್ಯುತ್ ತಂತಿ ತಗುಲಿ ವೃದ್ಧೆ ಮೃತ್ಯು
ಮಡಿಕೇರಿ, ಜು.28: ವಿದ್ಯುತ್ ತಂತಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕೆ.ಬಾಡಗ ಗ್ರಾಮದ ಭಗವತಿ ನಗರದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅರೆಯಡ ಮಾಚವ್ವ (80) ಎಂಬುವವರೇ ಮೃತ ಮಹಿಳೆ. ಮನೆಯ ಬಳಿ ಕುಡಿಯುವ ನೀರಿನ ಸಂಪರ್ಕಕ್ಕೆ ಮೋಟಾರ್ ಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಡೆದುಕೊಂಡು ಹೋಗುತ್ತಿದ್ದಾಗ ಮಾಚವ್ವ ಅವರು ಕಾಲು ಜಾರಿ ಬಿದ್ದಾಗ ತಂತಿ ತಗುಲಿದೆ ಎಂದು ಹೇಳಲಾಗಿದೆ.
ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ನಾಲ್ಕು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
Next Story