ಎಸಿಬಿ ದಾಳಿ ಪ್ರಕರಣ: ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆ

ಬೆಂಗಳೂರು, ಜು.28: ಕೈಗಾರಿಕಾ ಸುರಕ್ಷಾ ಮತ್ತು ಸ್ವಾಸ್ಥ್ಯ ಇಲಾಖೆ ಕಾರ್ಖಾನೆಗಳ ಉಪ ನಿರ್ದೇಶಕ ನವನೀತ್ ಕುಮಾರ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ.
ಜು.27ರಂದು ಉಪನಿರ್ದೇಶಕರಿಗೆ ಸಂಬಂಧಪಟ್ಟಂತೆ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಕಚೇರಿ ಹಾಗೂ ಅವರ ನಿವಾಸದ ಮೇಲೆ ಎಸಿಬಿ ತನಿಖಾಧಿಕಾರಿಗಳು, ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದ್ದರು. ಈ ವೇಳೆ ಉಪನಿರ್ದೇಶಕರ ಬಳಿ ಗಂಗಾನಗರದ ವಾಸದ ಮನೆ, ಆರ್.ಟಿ.ನಗರದಲ್ಲಿ ಮನೆ ಪತ್ತೆಯಾಗಿದೆ.
ಅದೇ ರೀತಿ, 5 ನಿವೇಶನಗಳು, 15 ಎಕರೆ ಕೃಷಿ ಭೂಮಿ, ಫಾರ್ಮಹೌಸ್, 1 ಪೆಟ್ರೋಲ್ ಬಂಕ್, 661 ಗ್ರಾಂ ಚಿನ್ನ, 18 ಕೆ.ಜಿ 278 ಗ್ರಾಂ ಬೆಳ್ಳಿ, 3,63 ಲಕ್ಷ ನಗದು, ಕಾರು, ಬೈಕ್, 37.80 ಲಕ್ಷ ಬೆಲೆಯ ಗೃಹೋಪಯೋಗಿ ವಸ್ತುಗಳು ತನಿಖೆಯಲ್ಲಿ ಪತ್ತೆಯಾಗಿದ್ದು, ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ.
Next Story





