ಜಿದ್ದಾ ಬಂದರಿನಲ್ಲಿ ಮೊದಲ ಹಜ್ ತಂಡಕ್ಕೆ ಸ್ವಾಗತ

ಜಿದ್ದಾ, ಜು. 28: ಈ ವರ್ಷದ ಮೊದಲ ಹಜ್ ಯಾತ್ರಿಕರ ತಂಡವನ್ನು ಜಿದ್ದಾ ಇಸ್ಲಾಮಿಕ್ ಬಂದರಿನಲ್ಲಿರುವ ಆರೋಗ್ಯ ತಪಾಸಣಾ ಕೇಂದ್ರ ಶುಕ್ರವಾರ ಸ್ವಾಗತಿಸಿದೆ.
ಈ ಬಂದರಿಗೆ ಆಗಮಿಸಿದ ಮೊದಲ ಎರಡು ಹಡಗುಗಳಾದ ‘ಮೌದಾ’ ಮತ್ತು ‘ನೂರ್’ ಸುಡಾನ್‌ನ 2,303 ಯಾತ್ರಿಕರನ್ನು ಕರೆತಂದಿವೆ.
ಅವರೆಲ್ಲರೂ ಅಗತ್ಯ ಆರೋಗ್ಯ ಪ್ರಮಾಣಪತ್ರಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಸಿಬ್ಬಂದಿ ಪರಿಶೀಲಿಸಿದರು ಹಾಗೂ ಆರೋಗ್ಯ ಸಚಿವಾಲಯ ಮಾನದಂಡಗಳಂತೆ ಅವರಿಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ನೀಡಿದರು.
ಸಚಿವಾಲಯದ ಸೂಚನೆಗಳಂತೆ, ಬಂದರಿಗೆ ಆಗಮಿಸುವ ಎಲ್ಲರಿಗೂ ಹಳದಿ ಜ್ವರ ಸೇರಿದಂತೆ ಹಲವು ನಿರ್ದಿಷ್ಟ ಕಾಯಿಲೆಗಳಿಗೆ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಸಿಬ್ಬಂದಿ ಪರಿಶೀಲಿಸಿದರು ಎಂದು ಕೇಂದ್ರದ ನಿರ್ದೇಶಕ ಡಾ. ನಶ್ವಾನ್ ಅಬ್ದುಲ್ಲಾ ತಿಳಿಸಿದರು.
ವೈದ್ಯಕೀಯ ಮತ್ತು ಬೆಂಬಲ ತಂಡಗಳ ಸಹಕಾರದೊಂದಿಗೆ ಮೊದಲ ತಂಡದ ಹಜ್ ಯಾತ್ರಿಕರ ತಪಾಸಣೆ ಸರಾಗವಾಗಿ ನಡೆಯಿತು ಎಂದು ಅವರು ಹೇಳಿದರು.
ಕೇಂದ್ರವು ವೈದ್ಯರು ಮತ್ತು ತಾಂತ್ರಿಕರು ಸೇರಿದಂತೆ ಒಟ್ಟು 115 ತಪಾಸಣಾ ತಂಡಗಳನ್ನು ಹೊಂದಿದೆ.





