ಜು. 7: ಅತಿಥಿ ಉಪನ್ಯಾಸಕರ ಆಯ್ಕೆಗೆ ನೇರ ಸಂದರ್ಶನ
ಮಂಗಳೂರು, ಜು.28: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ 2018-19ನೇ ಸಾಲಿಗೆ ಎಂಎಡ್ ಕೋರ್ಸ್ ಹಾಗೂ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲ ಯದಲ್ಲಿ ಬಿಎಡ್ ಕೋರ್ಸಿಗೆ ಅತಿಥಿ ಉಪನ್ಯಾಸಕರ ಆವಶ್ಯಕತೆ ಇದ್ದು, ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಎಂಎಡ್/ಎಂಎ ಎಜುಕೇಶನ್ ಪದವಿ ಹೊಂದಿರುವ (ಕನಿಷ್ಠ ಶೇ.55ಅಂಕಗಳೊಂದಿಗೆ) ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವರ್ಗ, ಸೇವಾನುಭವ, ದೂರವಾಣಿ ಸಂಖ್ಯೆ ಇತ್ಯಾದಿ ಸ್ವವರಗಳುಳ್ಳ ಅರ್ಜಿ ಮತ್ತು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲೆಗಳೊಂದಿಗೆ ಆ.7ರಂದು ಅಪರಾಹ್ನ 2 ಗಂಟೆಗೆ ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿವಿ ಮಂಗಳಗಂಗೋತ್ರಿ-574199 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣತೆ/ಪಿಎಚ್‌ಡಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





