ಮೈಸೂರು: ಚಂದ್ರಗ್ರಹಣ ಕಾಲವನ್ನೇ ಅಸ್ತ್ರವಾಗಿಸಿದ ಕಳ್ಳರು; ಎಂಟು ಅಂಗಡಿಗಳಲ್ಲಿ ಕನ್ನ
ಮೈಸೂರು,ಜು.28: ಚಂದ್ರಗ್ರಹಣ ಕಾಲವನ್ನೇ ಅಸ್ತ್ರವಾಗಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಗ್ರಹಣ ಕಾಲಕ್ಕೆ ಜನರು ಹೊರಬರಲಾರರು ಎಂಬುದನ್ನು ಅರಿತಿದ್ದ ಕಳ್ಳರು ಅದನ್ನೇ ಅಸ್ತ್ರಮಾಡಿಕೊಂಡು 8 ಅಂಗಡಿಗಳಿಗೆ ಕನ್ನ ಹಾಕಿದ ಘಟನೆ ನಡೆದಿದೆ.
ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳ ಶಟರ್ ಮುರಿದ ಕಳ್ಳರು ಅಲ್ಲಿರುವ ನಗದನ್ನು ದೋಚಿದ್ದಾರೆ. ಮೆಡಿಕಲ್ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳಲ್ಲಿ ಕಳ್ಳತನ ನಡೆಸಿದ್ದು, ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಶೆಟರ್ ಗಳನ್ನು ಮೀಟಿ ತೆರೆಯಲು ಹೈಡ್ರಾಲಿಕ್ ಜಾಕ್ ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕುವೆಂಪು ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story