ಮೀನುಗಾರಿಕೆ ದೋಣಿಗಳಿಗೆ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆಗೆ ಅರ್ಜಿ ಆಹ್ವಾನ
ಉಡುಪಿ, ಜು.28: ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ 2018-19ನೇ ಸಾಲಿನಲ್ಲಿ ಮೀನುಗಾರಿಕಾ ದೋಣಿಗಳಿಗೆ ರಿಯಾಯಿತಿ ದರದ ಸೀಮೆಎಣ್ಣೆ ರಹದಾರಿ ನವೀಕರಣ/ಹೊಸ ರಹದಾರಿ ನೀಡಲು ಅರ್ಹ ಮೀನುಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಈ ಹಿಂದೆ ಪಡೆದು ಕೊಂಡಿರುವ ಪರವಾನಗಿ, ಮೀನುಗಾರಿಕಾ ಇಲಾಖೆಯ ನೋಂದಣಿ ಪ್ರತಿ (ಆರ್‌ಸಿ), ಅರ್ಜಿದಾರರ ಆಧಾರ್ ಕಾರ್ಡ್, ಪಡಿತರ ಚೀಟಿ ಜೆರಾಕ್ಸ್ ಪ್ರತಿ ಹಾಗೂ ದೋಣಿ ಮಾಲಕರ ಬ್ಯಾಂಕ್ ಪುಸ್ತಕದ ಮುಖ್ಯ ಪುಟದ ಜೆರಾಕ್ಸ್ ಪ್ರತಿಯೊಂದಿಗೆ ಸಂಬಂಧಿಸಿದ ಸೀಮೆಎಣ್ಣೆ ವಿತರಣಾ ಕೇಂದ್ರದಲ್ಲಿ ಆ.5ರೊಳಗೆ ಸಲ್ಲಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರರು ಅಥವಾ ಮೀನುಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಪ್ರಕಟಣೆ ತಿಳಿಸಿದೆ.
Next Story





