ಪ್ರತಿಭೆಯಿಂದ ವ್ಯಕ್ತಿತ್ವ ರೂಪಿತ: ಶೀಲಾ ಕೆ ಶೆಟ್ಟಿ

ಉಡುಪಿ, ಜು.28: ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿತವಾಗುವುದು ಪ್ರತಿಭೆಯ ಅಳತೆಗೋಲಿನಿಂದ. ಸಂತರು, ಋಷಿಗಳನ್ನು, ಮಹಾನ್ ಪುರುಷರನ್ನು ಅವರ ಪ್ರತಿಭೆಯ ಹಿನ್ನೆಲೆಯಲ್ಲಿ ಇಂದು ಆದರ್ಶರೆಂದು ಸ್ಮರಿಸಿಕೊಳ್ಳಲಾಗುತ್ತಿದೆ. ಅಂತಹ ಶ್ರೇಷ್ಠರ ಸಾಲಿನಲ್ಲಿ ವಚನಕಾರ ಹಡಪದ ಅಪ್ಪಣ್ಣನೂ ಒಬ್ಬರಾಗಿದ್ದಾರೆ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದ್ದಾರೆ.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿಟ್ಟೂರು ಪ್ರೌಢಶಾಲೆ ಯಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿಟ್ಟೂರು ಪ್ರೌಢಶಾಲೆ ಯಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಹಾಭಾರತ, ರಾಮಾಯಣ ಹಾಗೂ ಭಗವದ್ಗೀತೆಗಳು ಹೇಗೆ ಜೀವನ ವನ್ನು ವೌಲ್ಯಯುತಗೊಳಿಸುವ ಸಂದೇಶವನ್ನು ಸಾರುತ್ತವೆಯೋ ಹಾಗೆಯೇ 12ನೇ ಶತಮಾನದಲ್ಲಿ ಶೋಷಿತರ ಬದುಕಿನ ಬವಣೆಯನ್ನು ಎತ್ತಿತೋರಿಸುವ ವಚನಗಳು ಅನುಭವದ ಸಂದೇಶವಾಗಿದೆ ಎಂದವರು ನುಡಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಅಜ್ಞಾನ ವನ್ನು ಜ್ಞಾನವೆಂಬ ಜ್ಯೋತಿಯ ಮೂಲಕ 12ನೇ ಶತಮಾನದಲ್ಲಿ ವಿಚಾರಧಾರೆ ಯನ್ನು ಸಾರಿದವರು ವಚನಕಾರರು. ಹಡಪದ ಅಪ್ಪಣ್ಣನವರ ವಚನಗಳು ಕೂಡ ಜನಜೀವನದ ಕುರಿತಾಗಿದ್ದು, ಅವರ ವಿಚಾರಧಾರೆಯನ್ನು ಅಳವಡಿಸಿಕೊಂಡು, ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ.ಆರ್. ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಡಪದ ಅಪ್ಪಣ್ಣನವರು ಸ್ವಾಮಿ ನಿಷ್ಠೆ ಹಾಗೂ ಕಾಯಕ ನಿಷ್ಠೆ ಹೊಂದಿದ ಶ್ರೇಷ್ಠ ವಚನಕಾರ. ಸಂಸ್ಕೃತದಲ್ಲಿ ವೇದ-ಉಪನಿಷತ್ತುಗಳು ಹೇಗೆ ಶ್ರೇಷ್ಠವೋ ಹಾಗೆಯೇ ಕನ್ನಡದಲ್ಲಿ ವಚನಗಳು ಸಾರುವ ವಿಚಾರಧಾರೆ ಅಷ್ಟೇ ಶ್ರೇಷ್ಠವಾಗಿವೆ. ಇಂದು ವಚನಕಾರರನ್ನು ಅವರ ವ್ಯಕ್ತಿತ್ವ ಹಾಗೂ ಪ್ರತಿಭೆಗಾಗಿ ಗೌರವಿಸಿ ಆದರ್ಶ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಟ್ಟೂರು ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ನಿಟ್ಟೂರು ಪ್ರೌಢ ಶಾಲೆಯ ಶಿಕ್ಷಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







