ದೀನದಯಾಳ್ ಅಂತ್ಯೋದಯ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಜು.28: ಉಡುಪಿ ನಗರಸಭೆಯ 2018-19ನೇ ಸಾಲಿನ ದೀನ ದಯಾಳ್ ಅಂತ್ಯೋದಯ ಯೋಜನೆ- ನಲ್ಮ್ ಅಭಿಯಾನದಡಿ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿನ ಕುಟುಂಬದ 18 ರಿಂದ 45 ವರ್ಷದೊಳಗಿನ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವ್ಯಕ್ತಿಗತ ಸ್ವಯಂ ಉದ್ಯೋಗ ನಡೆಸಲು (ಬಡ್ಡಿ ಸಹಾಯಧನ), ಗುಂಪು ಚಟುವಟಿಕೆ ನಡೆಸಲು (ಬಡ್ಡಿ ಸಹಾಯಧನ),ಉಚಿತ ತರಬೇತಿ ಕಾರ್ಯಕ್ರಮ, ಸ್ವ-ಸಹಾಯ ಗುಂಪು ರಚನೆ (ಆವರ್ತಕ ನಿಧಿ), ಗುಂಪುಗಳಿಗೆ ಸಾಲ ನೀಡಲು, ಈ ಸೌಲ್ಯಗಳನ್ನು ಪಡೆಯುವ ಸಲುವಾಗಿ ಆ.20ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ ಪ್ರತಿ, ವಿದ್ಯಾರ್ಹತೆಯ ಬಗ್ಗೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರಸಭೆಯ ಪೌರಾಯುಕ್ತರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





