ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ದಾವಣಗೆರೆ,ಜು.28: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ರಾಂ& ಕೋ ಸರ್ಕಲ್ ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಮಾತನಾಡಿ, ದೇಶ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿರುವ ಸೈನಿಕರ ಕಾರ್ಯ ನಿಷ್ಠೆ ಪ್ರತಿಯೊಬ್ಬ ಪ್ರಜೆಯಲ್ಲೂ ಬರಬೇಕು. ದೇಶ ದೊಡ್ಡದು, ದೇಶದ ಜನರು ನನ್ನವರು ಎನ್ನುತ್ತಾ ಚಳಿ ಗಾಳಿ ಮಳೆ ಬಿಸಿಲು ಎನ್ನದೆ ಹಗಲು ರಾತ್ರಿ ನಮಗಾಗಿ ದುಡಿಯುವ ಸೈನಿಕರ ಕಾರ್ಯ ನಿಷ್ಠೆ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ದೇಶರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖವಾಗಿದೆ. ಅವರ ತ್ಯಾಗ ಬಲಿದಾನ ದೇಶಭಕ್ತಿಯಿಂದ ದೇಶ ಸುಭಿಕ್ಷೆಯಿಂದ ಕೂಡಿದೆ ಎಂದರು.
ಸಮಾರಂಭದಲ್ಲಿ ಮೇಯರ್ ಶೂಭಫಲಗಟ್ಟಿ ಮತ್ತು ಉಪ ಮೇಯರ್ ಆದ ಚಮನ್ಸಾಬ್ ಮತ್ತು ಅಶ್ವಿನಿ ಪ್ರಶಾಂತ್ ನಾಗರಾಜ್ ಎನ್ನೆಸ್ಸೆಸ್ ಘಟಕದ ಮುಜಾಯಿದ್ ಶ್ರೀಕಾಂತ್ ವೆಂಕಟೇಶ್ ಕರಿಬಸಪ್ಪ ಯುವರಾಜ ಮುಂತಾದವರಿದ್ದರು.
Next Story





