ಟೋಲ್ ಸಿಬ್ಬಂದಿ ಮೇಲೆ ವಾಹನ ಚಾಲನೆಗೆ ಯತ್ನ
ಬೆಂಗಳೂರು, ಜು.28: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸುಂಕ ಕೇಳಿದ್ದಕ್ಕೆ ಕಾರು ಚಾಲಕನೊಬ್ಬ ಸಿಬ್ಬಂದಿ ಮೇಲೆ ವಾಹನ ಚಲಾಯಿಸಲು ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನೆಲಮಂಗಲ ಸಮೀಪದ ನವಯುಗ ಟೋಲ್ ನಲ್ಲಿ ಹದಿನೈದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೀಣ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Next Story





