ಆಗಸ್ಟ್ 14ರ ಮೊದಲು ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗಿ ಪ್ರಮಾಣ
ಕರಾಚಿ, ಜು.29: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಗಸ್ಟ್ 14ರ ಮೊದಲು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಕಳೆದ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಕಡೆಗೆ ಹೆಜ್ಜೆ ಇರಿಸಿದೆ.
ಪಿಟಿಐ 115 ಸ್ಥಾನಗಳನ್ನು ಗಳಿಸಿದ್ದು, ಸರಳ ಬಹುಮತ ಗಳಿಸಲು ಪಿಟಿಐಗೆ 12 ಸ್ಥಾನಗಳ ಕೊರತೆ ಇದೆ. ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಅಧಿಕಾರಕ್ಕೇರುವ ನಿಟ್ಟಿನಲ್ಲಿ ಪಿಟಿಐ ಯೋಚಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಮೊದಲು ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಎಂದು ಪಿಟಿಐ ನಾಯಕ ನಯೀನುಲ್ ಹಕ್ ತಿಳಿಸಿದ್ದಾರೆ.
Next Story