ಆ.1ರಿಂದ ಎಸ್‌ವೈಎಸ್ ಸ್ವಾತಂತ್ರ್ಯ ಪ್ರಜಾಸಂಗಮ
ಮಂಗಳೂರು, ಜು. 29: ರಾಜ್ಯಾದ್ಯಂತ ಎಸ್‌ವೈಎಸ್ ಸಂಘಟನೆಯ ಎಲ್ಲಾ ಸೆಂಟರ್‌ಗಳಲ್ಲಿ ‘ಭಾರತವು ಭಾರತೀಯರದ್ದಾಗಲಿ’ ಎಂಬ ಘೋಷ ವಾಕ್ಯದೊಂದಿಗೆ 72ನೇ ಸ್ವಾತಂತ್ರ್ಯದ ಅಂಗವಾಗಿ ಆಗಸ್ಟ್ 1ರಿಂದ 15ರ ತನಕ ಪ್ರಜಾಸಂಗಮ ಕಾರ್ಯಕ್ರಮ ಆಯೋಜಿಸಿವೆ.
ಬಂಟ್ವಾಳ ಸೆಂಟರ್ ವ್ಯಾಪ್ತಿಯ ಕಾರ್ಯಕ್ರಮವು ಬಿಸಿರೋಡ್‌ನ ಸ್ಪರ್ಶ ಹಾಲ್ನಲ್ಲಿ ಆ.1ರಂದು ಸಂಜೆ 4ಕ್ಕೆ ನಡೆಯಲಿದೆ. ಸ್ಥಳೀಯ ಶಾಸಕರು ರಾಜಕೀಯ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಾಯಕರು ಭಾಗವಹಿಸುವರು ಎಂದು ಎಸ್‌ವೈಎಸ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story





