Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಆಣೂರು: ನಿವೇಶನ ಜಾಗ ವಿವಾದ; ಎರಡು...

ಆಣೂರು: ನಿವೇಶನ ಜಾಗ ವಿವಾದ; ಎರಡು ಗ್ರಾಮಗಳ ದಲಿತರ ನಡುವೆ ಮಾರಾಮಾರಿ

ವಾರ್ತಾಭಾರತಿವಾರ್ತಾಭಾರತಿ29 July 2018 8:54 PM IST
share
ಆಣೂರು: ನಿವೇಶನ ಜಾಗ ವಿವಾದ; ಎರಡು ಗ್ರಾಮಗಳ ದಲಿತರ ನಡುವೆ ಮಾರಾಮಾರಿ

ಚಿಕ್ಕಮಗಳೂರು, ಜು.29: ದಲಿತ ಕಾಲನಿಯೊಂದರ ಸಮೀಪದಲ್ಲಿರುವ ಗೋಮಾಳ ಜಾಗದಲ್ಲಿ ನಿವೇಶನಕ್ಕಾಗಿ ಎರಡು ಗ್ರಾಮಗಳ ದಲಿತರ ನಡುವೆ ಪೈಪೋಟಿ, ಜಗಳ ನಡೆದಿರುವ ಘಟನೆ ತಾಲೂಕಿನ ಆಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳುವಾರೆ ಗ್ರಾಮದಲ್ಲಿ ವರದಿಯಾಗಿದೆ.

ತಾಲೂಕಿನ ಆಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಳುವಾರೆ ಹಾಗೂ ಕೆಸರಿಕೆ ಗ್ರಾಮಗಳಲ್ಲಿರುವ ನಿವೇಶನ ರಹಿತ ದಲಿತರ ನಡುವೆ ನಿವೇಶನಕ್ಕೆ ಮೀಸಲಿಟ್ಟ ಜಾಗದ ಸಂಬಂಧ ಶನಿವಾರ ಸಂಜೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದ ಘಟನೆ ನಡೆದಿದೆ. ಸುಮಾರು 25ರಿಂದ 30 ವರ್ಷಗಳ ಹಿಂದೆ ಮುಳುವಾರೆ ಗ್ರಾಮದ ಸ.ನಂ.210ರಲ್ಲಿ ಸುಮಾರು 3 ಎಕರೆಯಷ್ಟು ಜಾಗವನ್ನು ಮುಳುವಾರೆ ಗ್ರಾಮದ ದಲಿತ ಕಾಲನಿಯ ಹಿರಿಯರು ಗ್ರಾಮದ ನಿವೇಶನ ರಹಿತರಿಗಾಗಿ ಕಾಯ್ದುಕೊಂಡು ಬಂದಿದ್ದಾರೆನ್ನಲಾಗುತ್ತಿದ್ದು, ಇತ್ತೀಚೆಗೆ ಆಣೂರು ಗ್ರಾಪಂ ನಿವೇಶನ ರಹಿತರ ಪಟ್ಟಿ ತಯಾರಿಸಲು ಮುಂದಾದ ವೇಳೆ ಮುಳುವಾರೆ ಗ್ರಾಮದಲ್ಲಿ ದಲಿತರು ಕಾಯ್ದುಕೊಂಡು ಬಂದಿದ್ದ ಜಾಗದಲ್ಲಿ ನಿವೇಶನ ನೀಡುವಂತೆ ಗ್ರಾಪಂ ವ್ಯಾಪ್ತಿಯಲ್ಲೇ ಇರುವ ಕೆಸರಿಕೆ ಗ್ರಾಮದ ನಿವೇಶನ ರಹಿತ ದಲಿತರು ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

ತಾವು ಕಳೆದ 30 ವರ್ಷಗಳಿಂದ ಮೀಸಲಿಟ್ಟ ಜಾಗ ಪರ ಊರಿನವರ ಪಾಲಾಗುತ್ತದೆ ಎಂಬ ಭೀತಿಯಿಂದ ಮುಳವಾರೆ ಗ್ರಾಮದ ಸುಮಾರು 60 ಸ್ಥಳೀಯ ನಿವೇಶನ ರಹಿತ ದಲಿತ ಕುಟುಂಬಗಳು ತಮ್ಮ ಹಿರಿಯರು ಕಾಯ್ದುಕೊಂಡು ಬಂದಿದ್ದ ಜಾಗದಲ್ಲಿ ದಿಢೀರ್ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಗೋಮಾಳ ಜಾಗದಲ್ಲಿ ಮುಳುವಾರೆ ಗ್ರಾಮದ ದಲಿತರು ಗುಡಿಸಲು ನಿರ್ಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಕದ ಕೆಸರಿಕೆ ಗ್ರಾಮದ ದಲಿತರು ಸ್ಥಳಕ್ಕೆ ಹೋಗಿ ಗುಡಿಸಲುಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ್ದಾರೆನ್ನಲಾಗಿದ್ದು, ಈ ವೇಳೆ ಸ್ಥಳೀಯರು ಮತ್ತು ಕೆಸರಿಕೆ ಗ್ರಾಮದ ದಲಿತರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈಕೈ ಮಿಲಾಯಿಸಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ವಾರ್ತಾಭಾರತಿ ರವಿವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಗೋಮಾಳ ಜಾಗದಲ್ಲಿ ಸುಮಾರು ತಾತ್ಕಾಲಿಕ ಗುಡಿಸಲುಗಳನ್ನು ಮುಳುವಾರೆ ಗ್ರಾಮದ ಸ್ಥಳೀಯರ ನಿವೇಶನ ರಹಿತರು ನಿರ್ಮಿಸಿ ಕೊಂಡಿದ್ದ ದೃಶ್ಯ ಕಂಡು ಬಂತು. 60 ಕುಟುಂಬಗಳ ಮಹಿಳೆಯರು, ಮಕ್ಕಳು, ಯುವಕರೂ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ನಿವೇಶನ ರಹಿತರು, ಇಲ್ಲಿನ ಗೋಮಾಳ ಜಾಗದಲ್ಲಿ ಹಿಂದೆ ತಮ್ಮ ಹಿರಿಯರು ಮುಳುವಾರೆ ದಲಿತ ಕಾಲನಿಯ ನಿವೇಶನ ರಹಿತರಿಗಾಗಿ ಕಾಯ್ದುಕೊಂಡು ಬಂದಿದ್ದಾರೆ. ಸ್ಥಳೀಯ ಭೂ ಮಾಲಕರು ಜಾಗವನ್ನು ಅತಿಕ್ರಮಿಸಲು ಮುಂದಾದಗಲೂ ಅದಕ್ಕೆ ಅವಕಾಶ ನೀಡದೇ, ಜಾಗ ಒತ್ತುವರಿಯಾಗುವುದನ್ನು ತಡೆದು ಬೇಲಿ ಹಾಕಿ ಕಾಯ್ದುಕೊಂಡು ಬಂದಿದ್ದಾರೆ. ಈ ಜಾಗದಲ್ಲಿ ಸ್ಥಳೀಯ ದಲಿತರಿಗೆ ನಿವೇಶನ ಒದಗಿಸುವಂತೆ ಸಾಕಷ್ಟು ಬಾರಿ ಗ್ರಾಪಂ, ತಾಪಂ ಹಾಗೂ ಜಿ.ಪಂಚಾಯತ್‍ಗೆ ಅರ್ಜಿ ನೀಡಿದ್ದೇವೆ. ಆದರೆ ಜನಪ್ರತಿನಿಧಿಗಳು, ಕಂದಾಯಾಧಿಕಾರಿಗಳು ಕ್ರಮವಹಿಸಿಲ್ಲ. ಯಾವುದೇ ಕಾರಣಕ್ಕೂ ಈ ಜಾಗ ಪರ ಊರಿನವರ ಪಾಲಾಗುವುದನ್ನು ಬಿಡುವುದಿಲ್ಲ. ಮುಳುವಾರೆ ಗ್ರಾಮದ ದಲಿತ ಕಾಲನಿಯಲ್ಲಿ ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬಗಳು ವಾಸಿಸುವಂತಹ ಪರಿಸ್ಥಿತಿ ಇದ್ದು, ಗ್ರಾಮ ಪಂಚಾಯತ್ ಈ ಜಾಗದಲ್ಲಿ ಸ್ಥಳೀಯ ನಿವೇಶನ ರಹಿತ ದಲಿತ ಕುಟುಂಬಗಳಿಗೆ ಆಧ್ಯತೆ ಮೇರೆಗೆ ನಿವೇಶನಗಳನ್ನು ನೀಡಬೇಕೆಂದರು.

ಈ ವೇಳೆ ಗೋಮಾಳ ಜಾಗದಲ್ಲಿ ಸ್ಥಳೀಯರು ಗುಡಿಸಲು ನಿರ್ಮಿಸಿದ ಸುದ್ದಿ ತಿಳಿದ ಆಲ್ದೂರು ಠಾಣಾಧಿಕಾರಿ ರಾಘವೇಂದ್ರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಗೋಮಾಳ ಜಾಗ ಸಂಬಂಧ ಮುಳುವಾರೆ ಗ್ರಾಮದವರಿಗೂ, ಕೆಸರಿಕೆ ಗ್ರಾಮದದ ಯಾರಿಗೂ ಜಾಗ ಮಂಜೂರಾಗಿಲ್ಲ. ಜಾಗ ಮಂಜೂರಾಗದೇ ಸರಕಾರಿ ಜಾಗವನ್ನು ಅತಿಕ್ರಮಿಸುವುದು ಅಪರಾಧ. ನಿವೇಶನ ರಹಿತರು ಕಂದಾಯಾಧಿಕಾರಿಗಳು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಾನೂನಾತ್ಮಕವಾಗಿ ಸಮಸ್ಯೆಗೆ ಪರಿಹಾರಕಂಡುಕೊಳ್ಳಬೇಕು. ಕೂಡಲೇ ಗುಡಿಸಲುಗಳನ್ನು ತರವುಗೊಳಿಸುವಂತೆ ತಿಳಿಸಿದರು. ಈ ವೇಳೆ ಸ್ಥಳೀಯರು ಮಾತಿಗಿಳಿದಾಗ ಪೊಲೀಸರು ಹಾಗೂ ಸ್ಥಳೀಯ ದಲಿತರ ನಡುವೆ ಕೆಲಹೊತ್ತು ಮಾತಿನ ಚಮಮಕಿ ನಡೆಯಿತಾದರೂ ಠಾಣಾಧಿಕಾರಿ ರಾಘವೇಂದ್ರ ಸ್ಥಳೀಯರ ಮನವೊಲಿಸುವಲ್ಲಿ ಯಶಸ್ವಿಯಾಗಿ ಗುಡಿಸಲುಗಳನ್ನು ತೆರವುಗೊಳಿಸಿದರು.

ಇದೇ ಹೊತ್ತಿನಲ್ಲಿ ಕೆಸರಿಕೆ ಗ್ರಾಮದ ಸುಮಾರು 50 ಮಂದಿ ಸ್ಥಳಕ್ಕೆ ಆಗಮಿಸಿದ್ದರಿಂದ ಸ್ಥಳದಲ್ಲಿ ಮತ್ತೆ ಬಿಗುವಿನ ವಾತಾವರಣ ಉಂಟಾಗಿತ್ತು. ಆದರೆ ಠಾಣಾಧಿಕಾರಿ ರಾಘವೇಂದ್ರ ಮತ್ತು ಪೊಲೀಸ್ ಸಿಬ್ಬಂದಿ ಅಹಿತಕರ ಘಟನೆಗೆ ಅವಕಾಶ ನೀಡದೇ ಗೋಮಾಳ ಜಾಗದಿಂದ ಎರಡೂ ಗ್ರಾಮಗಳ ದಲಿತರು ಕದಲಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದು ತಿಳಿ ಹೇಳಿದ್ದರಿಂದ ಎರಡೂ ಗ್ರಾಮಗಳ ದಲಿತರು ಸ್ಥಳಬಿಟ್ಟು ಹೊರ ನಡೆದರು. ನಿವೇಶನ ಜಾಗ ಸಂಬಂಧ ಗ್ರಾಮದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದ್ದು, ಪೊಲೀಸರು, ಕಂದಾಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರ ಸಮಸ್ಯೆ ಪರಹಾರಕ್ಕೆ ಮುಂದಾಗಬೇಕಾಗಿದೆ.

ಸ.ನಂ.210ರಲ್ಲಿ ಈ ಜಾಗ ಸೇರಿದಂತೆ 184 ಎಕರೆ ಗೋಮಾಳ ಜಾಗವಿರುವ ಬಗ್ಗೆ ಸರಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಆದರೆ ಗ್ರಾಮದಲ್ಲಿ ನಿವೇಶನಕ್ಕಾಗಿ ಮುಳುವಾರೆ ದಲಿತ ಕಾಲನಿಯ ಹಿರಿಯರು ಕಾಯ್ದುಕೊಂಡು ಬಂದ ಜಾಗದ ಹೊರತಾಗಿ ಉಳಿದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಆದರೆ ಯಾರಿಗೂ ಹಕ್ಕುಪತ್ರ ನೀಡಿಲ್ಲ. ಕಳೆದ 25 ವರ್ಷಗಳಿಂದ ಈ ಜಾಗವನ್ನು ನಿವೇಶನಕ್ಕಾಗಿಯೇ ಕಾಯ್ದುಕೊಂಡು ಬರಲಾಗಿದೆ. ಈ ಹಿಂದೆ ಈ ಜಾಗವನ್ನು ಒತ್ತುವರಿ ಮಾಡಲು ಸ್ಥಳೀಯ ಭೂ ಮಾಲಕರು ಪ್ರಯತ್ನಿಸಿದಾಗ ನಾವೇ ಅವರಿಗೆ ತಿಳಿ ಹೇಳಿ ಜಾಗವನ್ನು ಉಳಿಸಿಕೊಂಡಿದ್ದೇವೆ. ಈಗ ಪಕ್ಕದ ಕೆಸರಿಕೆ ಗ್ರಾಮದವರು ಈ ಜಾಗದಲ್ಲೇ ನಿವೇಶನ ಕೇಳುತ್ತಿದ್ದು, ಇಲ್ಲಿ ಸ್ಥಳೀಯರಿಗೆ ಮಾತ್ರ ನಿವೇಶನ ನೀಡಬೇಕು.
- ಮಂಜುನಾಥ್, ಮುಳುವಾರೆ ಗ್ರಾಮಸ್ಥ

ಕೆಸರಿಕೆ ಗ್ರಾಮದ ನಿವೇಶನ ರಹಿತ ದಲಿತರಿಗೆ ಬೇರೆಡೆ ನಿವೇಶನ ನೀಡಲು ಗ್ರಾಮ ಪಂಚಾಯತ್ ಹಾಗೂ ಕಂದಾಯಾಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಮುಳುವಾರೆಯಲ್ಲಿ ನಿವೇಶನ ನೀಡಬಾರದು. ಮುಳವಾರೆಯಲ್ಲಿ ನಿವೇಶನವಿಲ್ಲದೇ ನೂರಾರು ಬಡ ದಲಿತರಿದ್ದಾರೆ. ಇವರಿಗೆ ಮೊದಲು ನಿವೇಶನ ಕಲ್ಪಿಸಬೇಕು. ಸ್ಥಳೀಯರಿಗೆ ನಿವೇಶನ ನೀಡುವಂತೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಪರ ಊರಿನಿಂದ ಗುಂಪು ಕಟ್ಟಿಕೊಂಡು ಬಂದು ಇಲ್ಲಿನ ದಲಿತರ ಮೇಲೆ ಹಲ್ಲೆ ಮಾಡಲು ಪ್ರಯತ್ನ ನಡೆಸುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಲಿತರ ನಡುವೆ ಘರ್ಷಣೆಗೆ ಅವಕಾಶ ನೀಡದೇ ಸಮಸ್ಯೆ ಪರಿಹಾರಕ್ಕೆ ಕೂಡಲೇ ಮುಂದಾಗಬೇಕು.
- ಪುಟ್ಟಸ್ವಾಮಿ, ದಲಿತ ಮುಖಂಡ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X