Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲಿಂಗತಾರತಮ್ಯ ಜೀವಂತವಾಗಿರುವುದು...

ಲಿಂಗತಾರತಮ್ಯ ಜೀವಂತವಾಗಿರುವುದು ವಿಷಾದನೀಯ: ಬಸವಪ್ರಭು ಸ್ವಾಮೀಜಿ

ವಾರ್ತಾಭಾರತಿವಾರ್ತಾಭಾರತಿ29 July 2018 10:28 PM IST
share
ಲಿಂಗತಾರತಮ್ಯ ಜೀವಂತವಾಗಿರುವುದು ವಿಷಾದನೀಯ: ಬಸವಪ್ರಭು ಸ್ವಾಮೀಜಿ

ದಾವಣಗೆರೆ,ಜು.29: ನಮ್ಮ ಸಂವಿಧಾನ ನಮಗೆ ಸಾಕಷ್ಟು ಅವಕಾಶ, ಸಮಾನತೆ, ಸ್ವತಂತ್ರವನ್ನು ಕಲ್ಪಿಸಿಕೊಟ್ಟರೂ ಸಹ ಲಿಂಗತಾರತಮ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿರುವುದು ವಿಷಾಧನೀಯ ಎಂದು ವಿರಕ್ತಮಠದ ಬಸವಪ್ರಭುಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.  

ನಗರದ ಕುವೆಂಪು ಕನ್ನಡಭವನದಲ್ಲಿ ದೇವಾಂಗ ಸಂಘದ ವತಿಯಿಂದ ಸಂಘದ ಉದ್ಘಾಟನೆ ಹಾಗೂ ಜಿಲ್ಲೆಯ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಗಂಡು ಶ್ರೇಷ್ಟ, ಹೆಣ್ಣು ಕನಿಷ್ಟ ಎಂಬ ಲಿಂಗತಾರತಮ್ಯ ಹಾಗೂ ಹೆಣ್ಣುಭ್ರೂಣಹತ್ಯೆ ಇಂದಿಗೂ ಸಮಾಜದಲ್ಲಿ ನೆಲೆಯೂರಿದೆ. ವಿದ್ಯಾವಂತರಾದರೂ ಸಹ ಹೆಣ್ಣು ಕೀಳೆಂಬ ಮನೋಭಾವವಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಬಸವತತ್ವದಲ್ಲಿ ಲಿಂಗಸಮಾನತೆಗೆ ಪೂರಕವಾದಂತ ವಚನವನ್ನು ದೇವರದಾಸಿಮಯ್ಯ ನೀಡಿದ್ದಾರೆ. 12ನೇ ಶತಮಾನದಲ್ಲಿ ಆದರ್ಶನೀಯ ದಾಂಪತ್ಯ ಜೀವನ ನಡೆಸಿದವರ ಉದಾಹರಣೆ ನೀಡಬೇಕಿದ್ದರೆ ಅದು ದೇವರದಾಸಿಮಯ್ಯನವರ ದಾಂಪತ್ಯ ಜೀವನ ಸಾಕ್ಷಿಯಾಗಿದೆ ಎಂದು ಹೇಳಿದರು. 

ಸಮಾಜದ ಮೂಲ ಗುರು, ಸಾಂಸ್ಕೃತಿಕ ನಾಯಕ ದೇವರದಾಸಿಮಯ್ಯನವರ ಹಾದಿಯಲ್ಲಿ ನಡೆದು ಬಂದ ಸಮಾಜವೆಂದರೆ ಅದು ದೇವಾಂಗ ಸಮಾಜವಾಗಿದೆ. ಬಸವತತ್ವಗಳನ್ನು ವಚನಗಳ ಮೂಲಕ ಸಂದೇಶ ಸಾರಿದ ಕೀರ್ತಿ ದೇವರದಾಸಿಮಯ್ಯನವರಿಗೆ ಸಲ್ಲುತ್ತದೆ. ಬಸವತತ್ವ ಕಾಯಕತತ್ವದ ಸಂದೇಶ ದೇವರದಾಸಿಮಯ್ಯನವರ ವಚನಗಳಲ್ಲಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹಿರಿಯ ವಚನಕಾರರಾಗಿ ದೇವರದಾಸಿಮಯ್ಯನವರು ಇದ್ದಾರೆ ಎಂದು ಸ್ಮರಿಸಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ವೆಂಕಟೇಶ್, ಸಂಘವನ್ನು ಕೇವಲ ಉದ್ಘಾಟನೆಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸದೆ 365 ದಿನವು ಸಂಘವನ್ನು ಚಟುವಟಿಕೆಯಿಂದ ಸಮಾಜಮುಖಿ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸುವಂತ ಕೆಲಸ ಮಾಡಬೇಕು. ಸಮಾಜ ಬಾಂಧವರಿಗೆ ಸಹಾಯವನ್ನು ಮಾಡುವುದರ ಜೊತೆಗೆ ತೊಂದರೆ ಇದ್ದಾಗ ಸಂಘಟಿತರಾಗಿ ಹೋರಾಡಿ ಅನುಕೂಲ ಮಾಡಿಕೊಡುವತ್ತ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. 

ನಗರ ಮತ್ತು ಹಳ್ಳಿಗಳಲ್ಲಿ ದೇವಾಂಗ ಸಮಾಜದ ವಿದ್ಯಾರ್ಥಿ ನಿಲಯಗಳ ಬಗ್ಗೆ ಸಮಾಜ ಬಾಂಧವರಿಗೆ ತಿಳಿದಿಲ್ಲ. ಆದ್ದರಿಂದ ಸಂಘಕ್ಕೆ ಸದಸ್ಯತ್ವವವನ್ನು ಹೆಚ್ಚಿಸಲು ನೋಂದಣಿಗೆ ಚಿಂತಿಸಿದ್ದು, ಸಮಾಜ ಬಾಂಧವರು ಸಂಘದ ಸದಸ್ಯತ್ವವನ್ನು ಪಡೆಯಲು ಮುಂದಾಗಬೇಕು. ಈಗಿರುವ ಹಳೇಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಹೊಸದಾಗಿ ನಿರ್ಮಿಸಿ ಕಾಂಪ್ಲೆಕ್ಸ್ ಗಳನ್ನು ಮಾಡಿ ಬಾಡಿಗೆಯನ್ನು ಪಡೆದು ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆಯ ಜೊತೆಗೆ ಆಶ್ರಯವನ್ನು ನೀಡಲಾಗುವುದು ಅಲ್ಲದೆ ಇನ್ನು ಅನೇಕ ಸಮಾಜದ ಪರ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವಿದ್ದು, ಇದಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

ಸಂಘದ ಅಧ್ಯಕ್ಷ ಜಿ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈಸೂರು ಬಸವರಾಜ್, ಬಟ್ಟೆ ಅಂಗಡಿ ಕೆಂಚಪ್ಪ, ಟಿ.ಅಜ್ಜೇಶಿ,ಎಸ್.ಡಿ.ರಂಗನಾಥ್ ಸೇರಿದಂತೆ ಇತರರು ಇದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X