ಬೆಳ್ತಂಗಡಿ: ಜುಜಾಟದಲ್ಲಿದ್ದ 18 ಮಂದಿ ಆರೋಪಿಗಳ ಸೆರೆ
ಬೆಳ್ತಂಗಡಿ, ಜು. 29: ಅಕ್ರಮವಾಗಿ ಉಲಾಯಿ-ಪಿದಾಯ್ ಆಡವಾಡುತ್ತಿದ್ದ 18 ಮಂದಿಯನ್ನು ಬೆಳ್ತಂಗಡಿ ಪೋಲಿಸರು ವಶಕ್ಕೆ ಪಡೆದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ವಿದ್ಯಮಾನ ಉಜಿರೆಯಲ್ಲಿ ರವಿವಾರ ನಡೆದಿದೆ.
ಉಜಿರೆಯಲ್ಲಿನ ಗೋಲ್ಡನ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿತ್ತು ಉಲಾಯಿ-ಪಿದಾಯಿ ಆಟ ಆಡುತ್ತಿದ್ದ ವಚನ್ ಹಾಗೂ ಇತರ 18 ಜನರನ್ನು ವಶಕ್ಕೆ ಪಡೆದು ಅವರಿಂದ 36,640 ನಗದು, 57 ಇಸ್ಪೀಟು ಎಲೆಗಳನ್ನು, 4 ದ್ವಿಚಕ್ರ ವಾಹನಗಳನ್ನು, ಪೀಠೋಪಕರಣಗಳನ್ನು ಹಾಗೂ 22 ವಿವಿಧ ಕಂಪೆನಿಯ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಮೌಲ್ಯ ರೂ. 2,18,690 ರೂ. ಎಂದು ಅಂದಾಜಿಸಲಾಗಿದೆ.
Next Story





