ಮಡಿಕೇರಿ: ನಾಗರಹೊಳೆ ರಕ್ಷಿತಾರಣ್ಯದಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆ

ಮಡಿಕೇರಿ, ಜು.29: ನಾಗರಹೊಳೆ ವನ್ಯಜೀವಿ ವಲಯದಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಆಚರಿಸಲಾಯಿತು. ಅರಣ್ಯ ಅಧಿಕಾರಿಗಳು ಕುಟ್ಟದ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಪೌಢಶಾಲೆ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸ್ಥಳದಲ್ಲೆ ಹುಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ನಾಗರಹೊಳೆ ವಲಯ ಉಪವಲಯ ಅರಣ್ಯಧಿಕಾರಿ ಅರವಿಂದ್, ಉಪ ಅರಣ್ಯ ಸಂರಕ್ಷಾಧಿಕಾರಿ ಪೌಲ್ ವನ್ಯಜೀವಿ ಪರಿಪಾಲಕರಾದ ಬೋಸ್ ಮಾದಪ್ಪ, ವೈದ್ಯಾಧಿಕಾರಿಗಳಾದ ಡಾ.ಮುಜೀಬ್ ವನ್ಯಜೀವಿ ವಿಭಾಗದ ನ್ಯಾಚೋರಲಿಸ್ಟ್, ಛಾಯಾಗ್ರಾಹಕದ ಗೋಪಿ ಹುಲಿ ಸಂರಕ್ಷಣೆ, ಅರಣ್ಯಗಳ ರಕ್ಷಣೆಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿದರು.
Next Story





