ಮಡಿಕೇರಿ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಮಡಿಕೇರಿ ಜು.29 : ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗದ ನಿವಾಸಿ ಬಿ.ಡಿ.ಗಂಗಾಧರ ಎಂಬವರು ಜು.19ರಂದು ನಾಪತ್ತೆಯಾಗಿದ್ದರು. ಆದರೆ ಅವರ ಶವ ಜು.28ರಂದು ಹರದೂರು ಬಳಿಯ ಹಾರಂಗಿ ಹೊಳೆಯ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





