ಪೇದೆ ಮೇಲೆ ಹಲ್ಲೆ ಆರೋಪ: 6 ಜನರು ವಶಕ್ಕೆ
ಬೆಂಗಳೂರು, ಜು.30: ಅವಧಿ ಮೀರಿ ತೆರೆದಿದ್ದ ಹೊಟೇಲ್ ಬಳಿ ಗುಂಪು ಸೇರಿದ್ದವರನ್ನು ಪ್ರಶ್ನಿಸಲು ಹೋದ ಯಲಹಂಕ ಉಪನಗರ ಠಾಣೆ ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣ ಸಂಬಂಧ 6 ಜನರನ್ನು ವಶಕ್ಕೆ ಪಡೆಯಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಸದಾಶಿವ ಕಾಂಬ್ಳೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಠಾಣೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸಾಮಾನ್ಯ ಉಡುಪಿನಲ್ಲಿ ರವಿವಾರ ತಡರಾತ್ರಿ ಸದಾಶಿವ ಕಾಂಬ್ಳೆ ಅವರು ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಯಲಹಂಕ ಉಪನಗರದ ನಾಲ್ಕನೆ ಹಂತದಲ್ಲಿ ಯುವಕರ ಗುಂಪಿನ ನಡುವೆ ಜಗಳ ನಡೆಯುತಿತ್ತು.
ಕೂಡಲೇ ಬೈಕ್ ನಿಲ್ಲಿಸಿ ಪ್ರಶ್ನಿಸಲು ಹೋದ ಸದಾಶಿವ ಕಾಂಬ್ಳೆ ಮೇಲೆ ಪೊಲೀಸ್ ಎಂದರೂ ಬಿಡದೇ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮಾಹಿತಿ ಬಂದ ಹೆಚ್ಚಿನ ಸಿಬ್ಬಂದಿ ಧಾವಿಸಿ ಗಾಯಗೊಂಡಿದ್ದ ಸದಾಶಿವ ಕಾಂಬ್ಳೆ ಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ 6 ಮಂದಿಯನ್ನು ಯಲಹಂಕ ಉಪನಗರ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story





