ತುಮಕೂರು: ವೇತನಕ್ಕೆ ಆಗ್ರಹಿಸಿ ಗಾರ್ಮೆಂಟ್ಸ್ ನೌಕರರ ದಿಢೀರ್ ಪ್ರತಿಭಟನೆ

ತುಮಕೂರು,ಜು.30: ಕಳೆದ ಎರಡು ತಿಂಗಳಿಂದ ಸಂಬಳವನ್ನು ನೀಡುತ್ತಿಲ್ಲವೆಂದು ಆರೋಪಿಸಿ ಗಾರ್ಮೆಂಟ್ಸ್ ಮಾಲಿಕರ ವಿರುದ್ಧ ಗಾರ್ಮೆಂಟ್ಸ್ ನೌಕರರು ಕಾರ್ಖಾನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ದಿಢೀರ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ನೌಕರರು ಕಳೆದ ಎರಡು ತಿಂಗಳಿಂದ ಸಂಬಳವನ್ನು ನೀಡುತ್ತಿಲ್ಲ. ಕಾರ್ಖಾನೆಗೆ ನಿಯಮಿತವಾಗಿ ಭೇಟಿ ನೀಡಿ ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಬೇಕಾದ ಕಾರ್ಮಿಕಾದಿಕಾರಿಗಳು ಕಾರ್ಖಾನೆಗೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಮಿಕರ ಮುಂದೆ ಆಗಮಿಸಿದ ಕಾರ್ಖಾನೆಯ ವ್ಯವಸ್ಥಾಪಕರು ಇನ್ನೆರಡು ದಿನದಲ್ಲಿ ಸಂಬಳವನ್ನು ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಯಿತು.
Next Story





