ಭಾರತ-ಪೆಸಿಫಿಕ್ ವಲಯದಲ್ಲಿ ಭಾರತ ಪ್ರಮುಖ ಭಾಗೀದಾರ: ಅಮೆರಿಕ
ವಾಶಿಂಗ್ಟನ್, ಜು. 30: ಭಾರತ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸುವ ಅಮೆರಿಕದ ಪ್ರಯತ್ನಗಳಲ್ಲಿ ಭಾರತ ಮಹತ್ವದ ಭಾಗೀದಾರ ದೇಶವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ಅಮೆರಿಕ ಮತ್ತು ಭಾರತ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಜೊತೆಯಲ್ಲೇ, ತಮ್ಮ ಭಾರತ-ಪೆಸಿಫಿಕ್ ಕಲ್ಪನೆಗೆ ಚಾಲನೆ ನೀಡಲು ಇತರ ಸಮಾನ ಮನಸ್ಕ ಭಾಗೀದಾರರೊಂದಿಗೆ, ಅದರಲ್ಲೂ ಮುಖ್ಯವಾಗಿ ಜಪಾನ್, ಆಸ್ಟ್ರೇಲಿಯ ಮತ್ತು ದಕ್ಷಿಣ ಕೊರಿಯಗಳೊಂದಿಗೆ ಸಹಕರಿಸುತ್ತಿದೆ ಎಂದು ಅಮೆರಿಕ ವಿದೇಶ ಕಾರ್ಯದರ್ಶಿಯ ಹಿರಿಯ ನೀತಿ ಸಲಹೆಗಾರ ಬ್ರಯಾನ್ ಹುಕ್ ಹೇಳಿದರು.
‘‘ಭಾರತ ಮತ್ತು ಅಮೆರಿಕಗಳ ನಡುವೆ ಬಲಗೊಳ್ಳುತ್ತಿರುವ ಆರ್ಥಿಕ, ಭದ್ರತಾ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಟ್ರಂಪ್ ಆಡಳಿತವು ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚಿನ ಗಮನ ನೀಡುತ್ತಾ ಬಂದಿದೆ. ಹಾಗೂ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆಯಬೇಕಾಗಿದೆ’’ ಎಂದು ಹುಕ್ ನುಡಿದರು.
Next Story





