ಮೂರು ಪ್ರತ್ಯೇಕ ಪ್ರಕರಣ: ಮೂವರು ನಾಪತ್ತೆ
ಬೆಂಗಳೂರು, ಜು.30: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಿಂದ ಮಹಿಳೆ ಹಾಗೂ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜು.11ರಂದು ಬೈರವೇಶ್ವರನಗರದ ನಿವಾಸಿ ಈಶ್ವರ ಎಂಬುವರ ಪತ್ನಿ ಶೃತಿ (27) ಎಂಬಾಕೆ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ಸು ಆಗಿಲ್ಲ ಎಂದು ತಿಳಿದುಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಸಂಜೀವಿನಿ ನಗರ, 4ನೇ ಮುಖ್ಯರಸ್ತೆ ನಿವಾಸಿ ಜಯಮ್ಮ ಎಂಬವರ ಮಗ ಮಹದೇವ(30) ಎಂಬುವರು ಜೂ.10ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಮನೆಯಿಂದ ಹೊರ ಹೋದವರು ವಾಪಸಾಗಿಲ್ಲ.
ಇನ್ನೊಂದು ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿನಗರದ ಪ್ರವೀಣ್‌ಕುಮಾರ್ ಎಂಬುವರ ಸ್ನೇಹಿತ ರಾಮ್ಪಾಲ್ (50) ಎಂಬುವರು ಜು.12ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಹೊರ ಹೋದವರು ಇದುವರೆಗೂ ವಾಪಸಾಗಿಲ್ಲ ಎನ್ನಲಾಗಿದೆ. ಈ ಮೂವರ ಬಗ್ಗೆ ಸುಳಿವು ಸಿಕ್ಕ ಕೂಡಲೇ ಸಮೀಪದ ಪೊಲೀಸ್ ಠಾಣೆಗಾಗಲಿ ಅಥವಾ ಸಹಾಯಕ ದೂರವಾಣಿಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.
Next Story





