ಬಾಂಬೆ ಸಲೀಂ ಸೇರಿ ಮೂವರ ಬಂಧನ

ಬೆಂಗಳೂರು, ಜು.30: ಪೊಲೀಸರಿಗೆ 40 ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬೇಕಾಗಿದ್ದ ಪ್ರಮುಖ ಆರೋಪಿ ಬಾಂಬೆ ಸಲೀಂ ಸೇರಿ ಮೂವರನ್ನು ಇಲ್ಲಿನ ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಸಲೀಂ, ಧನಂಜಯ್ ಮತ್ತು ರಾಜೇಶ್ ಬಂಧಿತ ಅರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
37 ಕ್ಕೂ ಹೆಚ್ಚು ಮನೆಗಳ್ಳತನ, ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿ ಸಲೀಂ ಭಾಗಿಯಾಗಿದ್ದು, ತನ್ನದೇ ಆದ ಗುಂಪು ಕಟ್ಟಿಕೊಂಡು ಮನೆಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಜೈಲಿನಲ್ಲಿದ್ದಾಗಲೂ ತನ್ನ ಸಹಚರರಿಂದ ಕಳ್ಳತನ ಮುಂದುವರಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಸಲೀಂ ಜತೆ ಬಂಧಿತರಾಗಿರುವ ಇಬ್ಬರು ಸಹಚರರು ಆತ ಹೇಳಿದಂತೆ ಬೀಗ ಹಾಕಿದ ಮನೆ ನೋಡಿ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಾಂಬೆ ಸಲೀಂ ನಂತರ ತನ್ನ ಸಹಚರರನ್ನೂ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿಕೊಂಡಿದ್ದ.
Next Story





