ಎಸ್‌ಬಿಐನ ಎಫ್‌ಡಿಗಳ ಮೇಲೆ ಬಡ್ಡಿದರ ಏರಿಕೆ

ಹೊಸದಿಲ್ಲಿ, ಜು.30: ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಹಲವಾರು ಪಕ್ವತಾ ಅವಧಿಗಳ ನಿರಖು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ್ದು,ಪರಿಷ್ಕೃತ ದರಗಳು ಸೋಮವಾರದಿಂದಲೇ ಜಾರಿಗೆ ಬಂದಿವೆ.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗಳ ಠೇವಣಿಗಳ ಮೇಲಿನ ಬಡ್ಡಿದರವನ್ನು 5ರಿಂದ 10 ಮೂಲಾಂಕ (ಶೇ.0.05ರಿಂದ ಶೇ.0.1)ದವರೆಗೆ ಹೆಚ್ಚಿಸಲಾಗಿದೆ.
Next Story





