ಸಾಲಗಾರರನ್ನು ನೋಡಿ 3ನೇ ಮಹಡಿಯಿಂದ ಹಾರಿದ ವ್ಯಕ್ತಿ!

ದುಬೈ, ಜು. 30: ತನಗೆ ಸಾಲ ಕೊಟ್ಟವರು ಮನೆಗೆ ಬಂದುದನ್ನು ನೋಡಿದ ಯುಎಇಯ ಭಾರತೀಯ ವ್ಯಕ್ತಿಯೊಬ್ಬರು ತನ್ನ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಹಾರಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
32 ವರ್ಷದ ವ್ಯಕ್ತಿಯು ಹಲವು ವ್ಯಕ್ತಿಗಳೊಂದಿಗೆ ಆರ್ಥಿಕ ವಿವಾದಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಅವರ ಪೈಕಿ ಕೆಲವರು ತನ್ನ ಫ್ಯ್ಲಾಟ್‌ಗೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿಯು ಕೆಳಗೆ ಹಾರಿದರು ಎನ್ನಲಾಗಿದೆ.
ದುಬೈಯ ಅಲ್ ಬುಹೈರಾ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
Next Story





