Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಎನ್ನ ಕಣ್ಣೊಳಗಣ ಕಟ್ಟಿಗೆ

ಎನ್ನ ಕಣ್ಣೊಳಗಣ ಕಟ್ಟಿಗೆ

ವಾರ್ತಾಭಾರತಿವಾರ್ತಾಭಾರತಿ31 July 2018 12:01 AM IST
share
ಎನ್ನ ಕಣ್ಣೊಳಗಣ ಕಟ್ಟಿಗೆ

 ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ.

ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ.
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ.
ಎನ್ನ ಮನದಲ್ಲಿಪ್ಪಮಾಯಾಪ್ರಪಂಚವ
ಕೆಡಿಸುವವರನಾರನೂ ಕಾಣೆನಯ್ಯ.

ಆದ್ಯರ ವೇದ್ಯರ ವಚನಗಳಿಂದ ಅರಿದೆವೆಂಬವರು ಅರಿಯಲಾರರು ನೋಡಾ.
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು.
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು.
ಎನ್ನ ಅಂಗದಲ್ಲಿಪ್ಪಅಹಂಕಾರವ ನಾನೆ ಸುಡಬೇಕು.
ಎನ್ನ ಮನದಲ್ಲಿಪ್ಪಮಾಯಾಪ್ರಪಂಚವ ನಾನೆ ಕಳೆಯಬೇಕು.
ಅಮುಗೇಶ್ವರ ಲಿಂಗವ ನಾನೆ ಅರಿಯಬೇಕು.
                                   -ಅಮುಗೆರಾಯಮ್ಮ

 ನಮ್ಮ ಕಣ್ಣೊಳಗಿನ ಬಯಕೆಯ ಕಸವನ್ನು ಬೇರೆಯವರಿಂದ ತೆಗೆಯಲಿಕ್ಕಾಗುವುದಿಲ್ಲ. ಬಯಕೆಗಳನ್ನು ಮೀರಿ ಬೆಳೆಯುವುದರ ಮೂಲಕವೇ ಆ ಕಸವನ್ನು ತೆಗೆಯಲು ಸಾಧ್ಯ. ನಾವು ದಾರಿತಪ್ಪಿದಾಗ ಉಂಟಾಗುವ ನೋವನ್ನು ಯಾರಿಂದಲೂ ಹೋಗಲಾಡಿಸಲು ಸಾಧ್ಯವಿಲ್ಲ. ಸನ್ಮಾರ್ಗದ ಮೂಲಕವೇ ಆ ನೋವನ್ನು ಗುಣಪಡಿಸಿಕೊಳ್ಳಬೇಕು. ನಮ್ಮಾಳಗಿನ ಎಲ್ಲ ಒಳ್ಳೆಯತನವನ್ನು ಸುಡುವ ಅಹಂಕಾರವನ್ನು ಸುಡುವ ಸಾಮರ್ಥ್ಯ ಯಾರಿಗೂ ಇರುವುದಿಲ್ಲ. ಅದು ನಮ್ಮಿಂದ ಮಾತ್ರ ಸಾಧ್ಯ. ನಮ್ಮ ಮನದೊಳಗಿನ ಮಾಯಾಪ್ರಪಂಚವನ್ನು ನಿರ್ನಾಮ ಮಾಡುವ ಶಕ್ತಿ ಬೇರೆ ಯಾರಿಗೂ ಇರುವುದಿಲ್ಲ. ಅದನ್ನು ನಮ್ಮಿಳಗೆ ನಾವೇ ಲಯಗೊಳಿಸಬೇಕು. ಆ ಮೂಲಕ ನಮ್ಮಿಳಗೂ ಮತ್ತು ಹೊರಗೂ ಇರುವ ದೇವರನ್ನು ನಾವೇ ಅರಿಯಬೇಕು ಎಂಬುದು ಅಮುಗೆರಾಯಮ್ಮನ ಆಶಯವಾಗಿದೆ.
 ಮನದೊಳಗಿನ ಮಾಯಾಪ್ರಪಂಚವನ್ನು ಕಳೆಯಬೇಕೆಂದು ಅಮುಗೆರಾಯಮ್ಮ ತಿಳಿಸಿದ್ದಾಳೆಯೆ ಹೊರತಾಗಿ ಈ ಜಗತ್ತಿಗೆ ಮಾಯಾಪ್ರಪಂಚ ಎಂದು ಕರೆದಿಲ್ಲ. ಒಳಗಿನ ಜಗತ್ತೇ ಇಷ್ಟಲಿಂಗವಾಗಿದೆ. ನಮ್ಮಿಳಗಿನ ಮಾಯಾಪ್ರಪಂಚ ಕಳೆದಾಗ ಮಾತ್ರ ಅದು ಕಾಣಿಸುತ್ತದೆ. ಒಳಗಿನ ಮಾಯಾಪ್ರಪಂಚವನ್ನು ನಿರ್ನಾಮ ಮಾಡಿದಾಗ ಹೊರಗಿನ ಮಾಯಾಪ್ರಪಂಚ ತನ್ನಿಂದ ತಾನೇ ಬಯಲಾಗುತ್ತದೆ. ಆಗ ನಮ್ಮ ಹೊರಗಿನ ಜಗತ್ತು ಜಂಗಮಲಿಂಗವಾಗಿ ಗೋಚರಿಸತೊಡಗುತ್ತದೆ. ‘ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾ ಪರಃ’ (ಪಾರಮಾರ್ಥಿಕವಾಗಿ ಸತ್ಯವಾದುದು ಬ್ರಹ್ಮವೊಂದೇ. ಜಗತ್ತು ಮಿಥ್ಯೆ. ಜೀವನು ಬ್ರಹ್ಮನಿಗಿಂತ ಬೇರೆಯಲ್ಲ.) ಎಂದು ಶಂಕರಾಚಾರ್ಯರು ಹೇಳುತ್ತಾರೆ. ಆದರೆ ವಚನಕಾರರ ಪ್ರಕಾರ ಮಾಯಾಶಕ್ತಿ ಪರಶಿವನ ಅವಿಭಾಜ್ಯ ಅಂಗವಾಗಿದೆ. ಮಾಯಾಶಕ್ತಿ ಎಂಬುದು ಶರೀರವಾದರೆ ಪರಶಿವನು ಆತ್ಮವಾಗುತ್ತಾನೆ. ಮಾಯಾಶಕ್ತಿಯಿಂದಲೇ ಸಕಲ ಜೀವಕೋಟಿ ಉತ್ಪತ್ತಿಯಾಗುತ್ತವೆ. ಅವುಗಳೊಳಗೆ ದೇವರು ಆತ್ಮಸ್ವರೂಪದಲ್ಲಿ ಇರುತ್ತಾನೆ. ಅಂತೆಯೆ ಬ್ರಹ್ಮ ಸತ್ಯವಾದರೂ ಜಗತ್ತು ಮಿಥ್ಯೆ ಅಲ್ಲ; ಅದು ವಾಸ್ತವವಾಗಿದೆ. ಕೋಟ್ಯಂತರ ವರ್ಷಗಳ ನಂತರ ಇಡೀ ವಿಶ್ವ ಲಯವಾದಾಗ ಮಾಯಾಶಕ್ತಿ ಆ ದೇವರಲ್ಲಿ ಲಯವಾಗಿ ಎಲ್ಲ ಬಯಲಾಗುತ್ತದೆ. ನಮ್ಮ ಬದುಕನ್ನು ಸ್ವಚ್ಛಗೊಳಿಸಿಕೊಂಡಾಗ ಮಾತ್ರ ನಮ್ಮ ಒಳಗಿನ ಸುಂದರ ಜಗತ್ತು ಕಾಣತೊಡಗುತ್ತದೆ. ಒಳಜಗತ್ತನ್ನು ಅರಿಯುವುದಕ್ಕಾಗಿ ಹೊರ ಜಗತ್ತು ಇದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X