ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿ ಎಸಿಗೆ ಮನವಿ

ಕುಂದಾಪುರ, ಜು.31: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಜಿತ್ ನಾಯಕ್ ಅವರನ್ನು ದುಷ್ಕರ್ಮಿ ಗಳು ಹತ್ಯೆಗೈದಿರುವುದನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸು ವಂತೆ ಮತ್ತು ನ್ಯಾಯವಾದಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿ ಕುಂದಾಪುರ ಬಾರ್ ಅಸೋಸಿಯೇಶನ್ ವತಿಯಿಂದ ಸೋಮವಾರ ಕುಂದಾ ಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ.ಭೂಬಾಲನ್ ಅವರಿಗೆ ಸಲ್ಲಿಸ ಲಾಯಿತು.
ಈ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡ ಬೇಕು. ರಾಜ್ಯದಲ್ಲಿ ನ್ಯಾಯವಾದಿಗಳಿಗೆ ಸೂಕ್ತ ದ್ರತೆ ಒದಗಿಸಬೇಕು ಎಂು ಸಂಘವು ಮನವಿಯಲ್ಲಿ ಆಗ್ರಹಿಸಿದೆ.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಸಲ್ವಾಡಿ ನಿರಂಜನ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ಪ್ರಮೋದ ಹಂದೆ, ಹಿರಿಯ ವಕೀಲ ಶ್ಯಾಮಲ ಭಂಡಾರಿ, ಕೆ.ಸಿ.ಶೆಟ್ಟಿ, ಕೆ.ರಾಜಾರಾಮ್ ಶೆಟ್ಟಿ, ಮಾಜಿ ಅಧ್ಯಕ್ಷ ಜನ್ನಾಡಿ ಸೋಮನಾಥ ಹೆಗ್ಡೆ, ಗಿರೀಶ್ ಗಂಗೊಳ್ಳಿ, ಶಾಡಿಗುಂಡಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.





