ಭಾರೀ ಮಳೆ: ಅಲೆಪ್ಪಿ ನಗರಕ್ಕೆ ಸಚಿವ ಝಮೀರ್ ಅಹ್ಮದ್ ಸಹಾಯ
50 ಸಾವಿರ ಕೆಜಿ ಅಕ್ಕಿ, 10 ಸಾವಿರ ಕೆಜಿ ಸಕ್ಕರೆ

ಬೆಂಗಳೂರು, ಜು.31: ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾಗಿರುವ ಕೇರಳ ರಾಜ್ಯದ ಅಲಪ್ಪುಜ ಜಿಲ್ಲೆಯ ಅಲೆಪ್ಪಿ ನಗರದ ಜನರಿಗೆ 50 ಸಾವಿರ ಕೆಜಿ ಅಕ್ಕಿ ಹಾಗೂ ಇತರೆ ಸಾಮಗ್ರಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ನೀಡಿದ್ದಾರೆ.
ತಮ್ಮ ವೈಯಕ್ತಿಕ ವೆಚ್ಚದಲ್ಲಿ 50 ಸಾವಿರ ಅಕ್ಕಿ ಮಾತ್ರಲ್ಲದೆ, 10 ಸಾವಿರ ಕೆಜಿ ಸಕ್ಕರೆ, 50 ಸಾವಿರ ಜನರಿಗೆ ಆಹಾರ ಸಿದ್ಧಪಡಿಸಲು ಬೇಕಾಗುವಷ್ಟು ಸಾಂಬರ್ ಪುಡಿಯನ್ನು ಸರಬರಾಜು ಮಾಡಿದ್ದಾರೆ. ಕೆಲವು ದಿನಗಳಿಂದ ಕೇರಳ ರಾಜ್ಯದ ಅಲಪ್ಪುಜ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಆ ಭಾಗದ ಸಂಸದರೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆಹಾರ ಧಾನ್ಯಗಳನ್ನು ಸಂತ್ರಸ್ತರಿಗೆ ಕಳುಹಿಸುವಂತೆ ಮಾಡಿದ ಮನವಿ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಕಳುಹಿಸಿಕೊಟ್ಟಿರುವುದಾಗಿ ಸಚಿವ ಝಮೀರ್ ಅಹ್ಮದ್ ಖಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





