ಹನೂರು: ವಿಶೇಷ ತಹಸೀಲ್ದಾರ್ ಗೆ ಬೀಳ್ಕೊಡುಗೆ

ಹನೂರು,ಜು.31: ವಿಶೇಷ ತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಎಂ.ಸಿ ಮಹಾದೇವಸ್ವಾಮಿರವರಿಗೆ ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಗೌರವಿಸಿ ಬೀಳ್ಕೊಟ್ಟರು.
ನಂತರ ಮಹಾದೇವಸ್ವಾಮಿ ತಮ್ಮ ವೃತ್ತಿ ಜೀವನದ ಅನುಭವ ಮತ್ತು ಅನಿಸಿಕೆಗಳನ್ನು ಕಚೇರಿ ಸಿಬ್ಬಂದಿಗಳ ಬಳಿ ಬಿಚ್ಚಿಟ್ಟರು. ಈ ಸಂದರ್ಭ ಪ್ರಭಾರ ವಿಶೇಷ ತಹಶೀಲ್ದಾರ್ ಶಿವರಾಮ್, ಉಪ ತಹಸೀಲ್ದಾರ್ ಸುರೇಖಾ, ರಾಜಶ್ವ ನಿರೀಕ್ಷಕರಾದ ನಂಜುಂಡಸ್ವಾಮಿ, ಮಾದೇಶ್, ರಾಜಶೇಖರ್ ಮೂರ್ತಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಜರಿದ್ದರು.
Next Story





