ದುಬೈಯಲ್ಲಿ : 6.84 ಕೋಟಿ ರೂ. ಗೆದ್ದ ಭಾರತೀಯ
ಇನ್ನೋರ್ವ ಮಹಿಳೆಗೆ ಬಿಎಂಡಬ್ಲ್ಯೂ ಕಾರು

ದುಬೈ, ಆ. 1: ಭಾರತೀಯರೊಬ್ಬರು ಮಂಗಳವಾರ 1 ಮಿಲಿಯ ಡಾಲರ್ (ಸುಮಾರು 6.84 ಕೋಟಿ ರೂಪಾಯಿ) ‘ದುಬೈ ಡ್ಯೂಟಿ ಫ್ರೀ’ ಲಾಟರಿ ಗೆದ್ದಿದ್ದಾರೆ.
ಕುವೈತ್‌ನಲ್ಲಿ ನೆಲೆಸಿರುವ ಸಂದೀಪ್ ಮೆನನ್ ಈ ಬಹುಮಾನ ಗೆದ್ದವರು. ಅವರು 1999ರಲ್ಲಿ ಈ ಲಾಟರಿ ಆರಂಭಗೊಂಡಂದಿನಿಂದ ಬಹುಮಾನ ಗೆದ್ದ 132ನೇ ಭಾರತೀಯರಾಗಿದ್ದಾರೆ ಎಂದು ‘ಖಲೀಜ್‌ಟೈಮ್ಸ್’ ವರದಿ ಮಾಡಿದೆ.
‘‘ನಾನು ನನ್ನ ಬದುಕಿನಲ್ಲಿ ಈವರೆಗೆ ಏನನ್ನೂ ಗೆದ್ದಿಲ್ಲ, ಅದರಲ್ಲೂ ಮುಖ್ಯವಾಗಿ ಇಷ್ಟು ದೊಡ್ಡ ಮೊತ್ತವನ್ನೆಂದೂ ನೋಡಿಲ್ಲ. ಈ ಅಚ್ಚರಿಯನ್ನು ಒದಗಿಸಿದ ದುಬೈ ಡ್ಯೂಟಿ ಫ್ರೀಗೆ ನಾನು ಋಣಿಯಾಗಿದ್ದೇನೆ’’ ಎಂದು ಮೆನನ್ ಹೇಳಿದ್ದಾರೆ.
ಇದೇ ಲಾಟರಿ ಡ್ರಾದಲ್ಲಿ ಇನ್ನೋರ್ವ ಭಾರತೀಯ ಮಹಿಳೆ, ದುಬೈಯಲ್ಲಿ ನೆಲೆಸಿರುವ ಶಾಂತಿ ಬೋಸ್ ‘ಬಿಎಂಡಬ್ಲು ಆರ್ ನೈನ್ ಟಿ ಸ್ಕ್ರಾಂಬ್ಲರ್’ ಕಾರನ್ನು ಗೆದ್ದಿದ್ದಾರೆ.
Next Story





