ಗೋಲನ್ ಹೈಟ್ಸ್ ಜೊತೆಗಿನ ಗಡಿ ಸಿರಿಯ ನಿಯಂತ್ರಣಕ್ಕೆ

ಬೈರೂತ್ (ಲೆಬನಾನ್), ಆ. 1: ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನೊಂದಿಗಿನ ಗಡಿಯ ನಿಯಂತ್ರಣವನ್ನು ಸಿರಿಯದ ಅಸಾದ್ ಸರಕಾರ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಸೋಮವಾರ ಸಾಧಿಸಿದೆ.
ಐಸಿಸ್ ಜೊತೆಗೆ ನಂಟು ಹೊಂದಿರುವ ಉಗ್ರರು ಈ ಪ್ರದೇಶದಲ್ಲಿರುವ ತಮ್ಮ ಕೊನೆಯ ನೆಲೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ದೇಶದ ನೈರುತ್ಯ ಮೂಲೆಯನ್ನು ವಶಕ್ಕೆ ತೆಗೆದುಕೊಳ್ಳಲು ಸಿರಿಯದ ಸರಕಾರಿ ಸೇನೆಯು ಆರು ವಾರಗಳ ಕಾಲ ಹೋರಾಟ ನಡೆಸಿದೆ.
2011ರಲ್ಲಿ ಅಸ್ಸಾದ್ ಅಲ್ ಬಶರ್ ಸರಕಾರದ ವಿರುದ್ಧ ಬಂಡುಕೋರರು ಬಂಡಾಯ ಘೋಷಿಸಿದ ಸಂದರ್ಭದಲ್ಲೇ ಉಗ್ರರು ಗೋಲನ್ ಹೈಟ್ಸ್‌ಗೆ ಹೊಂದಿಕೊಂಡಿರುವ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
Next Story





