ಬೆಂಗಳೂರು: ಮೆಡಿಮ್ಯಾಜಿಕ್ ಆ್ಯಪ್ ಬಿಡುಗಡೆ ಕಾರ್ಯಕ್ರಮ
ಬೆಂಗಳೂರು, ಆ. 1: ‘ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶೈಕ್ಷಣಿಕ ಫಲಿತಾಂಶಗಳು ಉತ್ತಮವಾಗಲು ಕಲಿಕೆ, ಮರುಕಳಿಕೆ ಮತ್ತು ಪರೀಕ್ಷೆಯ ಸಾಧನೆಯನ್ನು ಸುಧಾರಿಸಲು ಎಸ್-3ಡಿ ಮೆಡಿಮ್ಯಾಜಿಕ್ ಸಹಕಾರಿ ಎಂದು ಆರ್ಜಿಯುಎಚ್ಎಸ್ನ ಸೆನೆಟ್ ಸದಸ್ಯ ಡಾ.ಇಫ್ತಿಖಾರ್ ಅಲಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ವೈದ್ಯ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಮೆಡಿಮ್ಯಾಜಿಕ್ ಆ್ಯಪ್ನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನವಾಗಿ ಬಿಡುಗಡೆಯಾಗಿರುವ ಆ್ಯಪ್ ವೈದ್ಯ ಶಿಕ್ಷಣದ ಭವಿಷ್ಯ ಎಂದು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಈ ವೇಳೆ ಚಿತ್ರ ನಿರ್ದೇಶಕ, ನಟ ಮಾಸ್ಟರ್ ಕಿಶನ್, ಡಾ.ಮಹೇಶ್ ಕೊಟ್ಟಪಲ್ಲಿ, ಲಂಡನ್ನ ಫೊರ್ಮ್ಯಾಕ್ಸ್ನ ಸಿಎಂಡಿ ಪ್ರೇಮ್ಚಂದರ್ ರಾಜನ್ ಉಪಸ್ಥಿತರಿದ್ದರು.
Next Story