ಹೊನ್ನಾಳಿ: ಪ್ರೀತಿಗೆ ಯುವತಿ ಮನೆಯವರ ವಿರೋಧ; ಯುವಕ ಆತ್ಮಹತ್ಯೆ

ಹೊನ್ನಾಳಿ,ಅ.01: ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಸಹಳ್ಳಿ ಕ್ಯಾಂಪ್ ನಲ್ಲಿ ನಡೆದಿದೆ.
ಹೊಸಹಳ್ಳಿ ಕ್ಯಾಂಪ್‍ನ ಗಣೇಶ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಶಿವಮೊಗ್ಗ ತಾಲೂಕಿನ ನಾಗಸಮುದ್ರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿ ಮನೆಯವರು ಗಣೇಶನಿಗೆ ಎಚ್ಚರಿಕೆ ನೀಡಿದ ಪರಿಣಾಮ ಮನನೊಂದು ಗ್ರಾಮದ ಹೊರಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





