ದೇವರ ಕೈಗಳಲ್ಲಿ ಸೇತುವೆ
ಪ್ರಪಂಚೋದ್ಯ
ಕೇಂದ್ರ ವಿಯೇಟ್ನಾಂನ ಬೆಟ್ಟದ ದಟ್ಟ ಕಾಡಿನ ನಡುವೆ ಎರಡು ಬೃಹದಾಕಾರಾದ ಕೈಗಳಿವೆ. ಈ ಕೈ ಜನರಿಂದ ತುಂಬಿದ ಸೇತುವೆಯೊಂದನ್ನು ಹಿಡಿದುಕೊಂಡಿದೆ. ಇದರಲ್ಲಿರುವ ಜನರು ತಮ್ಮ ಮೊಬೈಲ್ ಫೋನ್ನಿಂದ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದು ಇತ್ತೀಚೆಗೆ ಪ್ರವಾಸಿ ಕೇಂದ್ರವಾಗಿ ಜನಪ್ರಿಯವಾದ ಸ್ಥಳ.
ದೇವರ ಕೈಗಳ ಮೂಲಕ ಹಾದು ಹೋಗಿರುವ ಬಂಗಾರದ ನೂಲಿನಲ್ಲಿ ನಾವು ಸಂಚರಿಸುತ್ತಿದ್ದೇವೆ ಎಂಬ ಭಾವನೆ ಸಂದರ್ಶಕರಿಗೆ ಉಂಟಾಗುವಂತೆ ಈ ಕೈಗಳನ್ನು ವಿನ್ಯಾಸಗೊಳಿಸಲಾಗಿದೆ. ಕಳೆದ ಜೂನ್ನಲ್ಲಿ ದನಾಂಗ್ನ ಬಾ ನಾ ಹಿಲ್ಸ್ ಸಮೀಪ ಆರಂಭವಾಗಿರುವ ಈ ಸುವರ್ಣ ಸೇತುವೆ ಈಗ ಅಸಂಖ್ಯಾತ ಜನರನ್ನು ಆಕರ್ಷಿಸುತ್ತಿದೆ.
ಈ ಸೇತುವೆಯ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಸೇತುವೆಯನ್ನು ನಿರ್ಮಿಸುವಾಗ ಇದು ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ವಾಸ್ತುಶಿಲ್ಪಿ ಅಂುಕೊಂಡಿರಲೇ ಇಲ್ಲ.
ಜಗತ್ತಿನಾದ್ಯಂತ ಈ ಸೇತುವೆಯ ಚಿತ್ರವನ್ನು ಜನರು ಶೇರ್ ಮಾಡಿ ಕೊಳ್ಳುತ್ತಿರುವುದು ನಮಗೆ ಹೆಮ್ಮೆ ಉಂಟು ಮಾಡಿದೆ ಎಂದು ಟಿ.ಎ. ಲ್ಯಾಂಡ್ಸ್ಕೇಪ್ನ ಸ್ಥಾಪಕ ಹಾಗೂ ಪ್ರಾಥಮಿಕ ವಿನ್ಯಾಸಗಾರ ವು ವಿಯೆಟ್ ಅನ್ಹ್ ತಿಳಿಸಿದ್ದಾರೆ.
150 ಮೀಟರ್ ಉದ್ದವಿರುವ ಈ ಸೇತುವೆ ಬೆಟ್ಟದ ದಟ್ಟ್ಟ ಕಾಡುಗಳ ನಡುವೆ ಹಾವಿನಂತೆ ಹರಿದು ಹೋಗುತ್ತದೆ. ಈ ಬೆಟ್ಟವನ್ನು 1919ರಲ್ಲಿ ಫ್ರೆಂಚ್ ವಸಾಹತುಶಾಹಿಗಳು ೊದಲ ಬಾರಿಗೆ ಅಭಿವೃದ್ಧಿಗೊಳಿಸಿದ್ದರು.
ಈಗ ಈ ಪ್ರದೇಶ ಪ್ರಮುಖ ಆಕರ್ಷಣೆಯ ಕೇಂದ್ರ. ಇಲ್ಲಿ ಕೇಬಲ್ ಕಾರ್ ಅಳವಡಿಸಲಾಗಿದೆ. ಕೋಟೆ, ಕೆಥಡ್ರಲ್, ಉದ್ಯಾನವನ, ಲೇಡಿ ಗಾಗಾ ಹಾಗೂ ಮೈಕಲ್ ಜೋರ್ಡಾನ್ ಅವರ ಮೇಣದ ಪ್ರತಿಮೆ ಗಳಿರುವ ವ್ಯಾಕ್ಸ್ ಮ್ಯೂಸಿಯಂ ಅನ್ನು ಒಳಗೊಂಡ ಈ ಪ್ರದೇಶ ಫ್ರಾನ್ಸ್ನ ಮಧ್ಯಕಾಲೀನ ಗ್ರಾಮದ ಪ್ರತಿರೂಪ.