ಸುರತ್ಕಲ್: ಎಸ್ಸೆಸ್ಸೆಫ್‌ನಿಂದ ರಕ್ತದಾನ ಶಿಬಿರ

ಮಂಗಳೂರು, ಆ.2: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ವತಿಯಿಂದ ಕೃಷ್ಣಾಪುರ ಜೂನಿಯರ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ರಕ್ತದಾನ ಶಿಬಿರವನ್ನು ಮಾಜಿ ಶಾಸಕ ಬಿ.ಎ. ಮೊಹಿದಿನ್ ಬಾವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಬಿರವು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ಅಧ್ಯಕ್ಷ ಎಂ.ಎಚ್.ಆರಿಫ್ ಝುಹ್ರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಇಡಿಸಿ ಕರ್ನಾಟಕ ಅಧ್ಯಕ್ಷ ಕೆ.ಕೆ. ಮುಹಿಯುದ್ದೀನ್ ಸಖಾಫಿ ದುಆಗೈದರು.
ಈ ಸಂದರ್ಭದಲ್ಲಿ ಜೂನಿಯರ್ ಕಾಲೇಜು ಅಧ್ಯಕ್ಷ ಅಮೀರ್, ಕಾಟಿಪಳ್ಳ ವಲಯಾಧ್ಯಕ್ಷ ಉಮರುಲ್ ಫಾರೂಕ್ ಅಹ್ಸನಿ, ಮಾಜಿ ರಾಜ್ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ, ಅಲ್ ಅರಫಾ ಮ್ಯಾರೇಜ್ ಕಮಿಟಿ ಅಧ್ಯಕ್ಷ ಇಸ್ಮಾಯೀಲ್ ಕಾನಾ, ಕೆಎಂಸಿ ಆಸ್ಪತ್ರೆ ವೈದ್ಯ ಉಮರುಲ್ ಫಾರೂಕ್ ಅಹ್ಸನಿ ಶೇಡಿಗುರಿ, ಎಸ್‌ವೈಎಸ್ ನಾಯಕ ಹಸನಾಕ, ಶಂಸುದ್ದೀನ್, ಜಿಲ್ಲಾ ಸದಸ್ಯ ರಫೀಕ್, ಡಿವಿಜನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಮೂಸಾ, ಕ್ಯಾಂಪಸ್ ಕಾರ್ಯದರ್ಶಿ ತಂಸೀರ್ ಹಾಗೂ ನಾಲ್ಕು ವಲಯಗಳ ಉಸ್ತುವಾರಿಗಳಾದ ಹೈದರ್ ಮದನಿ, ಫಾರೂಕ್ ಶೇಡಿಗುರಿ, ಬಶೀರ್ ಕಾನಾ, ಫಾರೂಕ್ ಮಂಗಳಪೇಟೆ, ಹೈದರ್ ಕಾಟಿಪಳ್ಳ, ರಿಜ್ವಾನ್ ಕೃಷ್ಣಾಪುರ ಉಪಸ್ಥಿತರಿದ್ದರು. ಮುಹಮ್ಮದ್ ಆರಿಫ್ ಹಾಜಿ ಸ್ವಾಗತಿಸಿದರು. ನೌಫಾಲ್ ಗುತ್ತಕಾಡು ನಿರೂಪಿಸಿದರು.





