ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

ಬೆಂಗಳೂರು, ಆ.2: ಮಾದಕ ವಸ್ತು ಕೊಕೇನ್ ಮಾರಾಟ ಆರೋಪದಡಿ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ದೇಶದ ಜರ್ರಿ(29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಿನಗರ ವ್ಯಾಪ್ತಿಯಲ್ಲಿ ನೈಜೀರಿಯಾ ಮೂಲದ ಪ್ರಜೆ ಮಾದಕ ವಸ್ತುವನ್ನಿಟ್ಟು ಕೊಂಡು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದಾನೆಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನ ವಶದಲ್ಲಿದ್ದ 5 ಗ್ರಾಂ ತೂಕದ ಕೊಕೇನ್, ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.
Next Story





