ದಾವಣಗೆರೆ: ಮಾಧ್ಯಮ ಪ್ರಶಸ್ತಿಗೆ ಐವರು ಆಯ್ಕೆ

ದಾವಣಗೆರೆ,ಆ.02: ಜಿಲ್ಲಾ ವರದಿಗಾರರ ಕೂಟದ 2018ನೇ ಸಾಲಿಗೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಐವರು ಪತ್ರಕರ್ತರನ್ನು ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ತಿಳಿಸಿದ್ದಾರೆ.
2018ನೇ ಸಾಲಿಗೆ ಮಾಧ್ಯಮ ಪ್ರಶಸ್ತಿಗೆ ಪತ್ರಕರ್ತರಾದ ಎನ್.ಆರ್.ನಟರಾಜ್, ಮಂಜುನಾಥ ಕಾಡಜ್ಜಿ, ಹೆಚ್.ಎಂ.ರಾಜಶೇಖರ್, ಐ. ಗುರುಶಾಂತಪ್ಪ ಹಾಗೂ ಪರಶುರಾಮ್ ಹೆಚ್.ಟಿ.ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬರುವ ಆ. 5 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Next Story





