ಹರಪನಹಳ್ಳಿ: ಸಾಲದ ವಿಚಾರಕ್ಕೆ ಮನನೊಂದ ಯುವಕ ಆತ್ಮಹತ್ಯೆ
ಹರಪನಹಳ್ಳಿ,ಆ.02: ಸಾಲದ ವಿಚಾರವಾಗಿ ಮನನೊಂದ ಯುವಕನೊಬ್ಬ ಹೊಲದಲ್ಲಿ ವಿದ್ಯುತ್ ಪೆಟ್ಟಿಗೆಗೆ ಕೈಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ದುಗ್ಗಾವತಿ ಗ್ರಾಮದ ಎಚ್.ಚಂದ್ರಪ್ಪ ತಂದೆ ಅಡಿವೆಪ್ಪ (20) ಆತ್ಮಹತ್ಯೆಗೆ ಶರಣಾದ ಯುವಕ. ಹಿಂದಿನ ರಾತ್ರಿ ಸಾಲದ ವಿಚಾರವಾಗಿ ಮನೆಯಲ್ಲಿ ಚರ್ಚೆ ನಡೆಸಿದ್ದು, ಇದರಿಂದ ಮನನೊಂದು ಹೊಲದ ವಿದ್ಯುತ್ ಮೋಟಾರು ಪೇಟಿಗೆಗೆ ಕೈ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಯುವಕನ ತಂದೆ ಎಚ್.ಅಡಿವೆಪ್ಪ ಹಲವಾಗಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story