‘ಮಾಸ್ಟರ್ಶೆಫ್ ಆಸ್ಟ್ರೇಲಿಯ’ ಆಗಿ ಭಾರತ ಮೂಲದ ವ್ಯಕ್ತಿ
ಅಡಿಲೇಡ್ (ಆಸ್ಟ್ರೇಲಿಯ), ಆ. 3: ತಮಿಳುನಾಡಿನ ಕೊಯಂಬತೋರ್ ನಿವಾಸಿಯಾಗಿರುವ ಶಶಿ ಚೇಳಯ್ಯ ‘ಮಾಸ್ಟರ್ಶೆಫ್ ಆಸ್ಟ್ರೇಲಿಯ’ ಬಾಣಸಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಜೊತೆಗೆ ಅವರು 2,50,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 1.26 ಕೋಟಿ ರೂಪಾಯಿ) ನಗದು ಬಹುಮಾನ ಪಡೆದಿದ್ದಾರೆ.
ಆಸ್ಟ್ರೇಲಿಯದ ಅಡಿಲೇಡ್ನಲ್ಲಿ ಜೈಲು ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಅವರು ಸ್ಪರ್ಧೆಯಲ್ಲಿ 100ರಲ್ಲಿ 93 ಅಂಕಗಳನ್ನು ಗಳಿಸಿದ್ದಾರೆ.
10ನೇ ವರ್ಷದ ಸ್ಪರ್ಧೆಯಲ್ಲಿ ವಿಜೇತರಾಗಿರುವ ಅವರು ಸಿಂಗಾಪುರದಲ್ಲಿ 12 ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು.
ಆರು ವರ್ಷಗಳ ಹಿಂದೆ ಅವರು ಅಡಿಲೇಡ್ಗೆ ಬಂದರು.
Next Story