ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತ 110/5

ಎಜ್‌ಬಾಸ್ಟನ್, ಆ.3: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 194 ರನ್ ಗುರಿ ಪಡೆದಿದ್ದ ಭಾರತ ಮೂರನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 36 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 110 ರನ್ ಗಳಿಸಿದೆ.
ನಾಯಕ ವಿರಾಟ್ ಕೊಹ್ಲಿ 43(76 ಎಸೆತ, 3 ಬೌಂಡರಿ)ಹಾಗೂ ದಿನೇಶ್ ಕಾರ್ತಿಕ್(18)6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 32 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಾಲ್ಕನೇ ದಿನವಾದ ಶನಿವಾರ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಗೆಲುವಿಗೆ ಇನ್ನು 84 ರನ್ ಗಳಿಸಬೇಕಾಗಿದೆ.
ಗೆಲ್ಲಲು ಸ್ಪರ್ಧಾತ್ಮಕ ಮೊತ್ತವನ್ನು ಪಡೆದಿದ್ದ ಭಾರತಕ್ಕೆ ಉತ್ತಮ ಆರಂಭ ನೀಡಲು ಮುರಳಿ ವಿಜಯ್(6) ಹಾಗೂ ಶಿಖರ್ ಧವನ್(13) ಮತ್ತೊಮ್ಮೆ ವಿಫಲರಾದರು. ಲೋಕೇಶ್ ರಾಹುಲ್ 13 ರನ್ ಗಳಿಸಿ ನಿರಾಸೆಗೊಳಿಸಿದರು. ಅಜಿಂಕ್ಯ ರಹಾನೆ(2), ಆರ್.ಅಶ್ವಿನ್(15)ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಇಂಗ್ಲೆಂಡ್ ಪರ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು.
Next Story





