Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೈತಪ್ಪಿ ಕೆತ್ತಲು ಕಾಲಿಗೆ ಮೂಲ

ಕೈತಪ್ಪಿ ಕೆತ್ತಲು ಕಾಲಿಗೆ ಮೂಲ

ವಾರ್ತಾಭಾರತಿವಾರ್ತಾಭಾರತಿ4 Aug 2018 12:00 AM IST
share
ಕೈತಪ್ಪಿ ಕೆತ್ತಲು ಕಾಲಿಗೆ ಮೂಲ

ಕೈತಪ್ಪಿಕೆತ್ತಲು ಕಾಲಿಗೆ ಮೂಲ,

ಮಾತು ತಪ್ಪಿನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ,
ಕರ್ಮಹರ ಕಾಳೇಶ್ವರಾ.
                  -ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

ಬಾಚಿ ಎಂದರೆ ಮರವನ್ನು ಕೆತ್ತಲು ಬಡಗಿಗಳು ಬಳಸುವ ಅಗಲವಾದ ಬಾಯಿಯ ಕಬ್ಬಿಣದ ಸಾಧನ. ಬಡಗಿಗಳಿಗೆ ಬಾಚಿಕಾಯಕದವರು ಎನ್ನುತ್ತಾರೆ. ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯ ಕೇವಲ ಎರಡು ಪುಟ್ಟ ವಚನಗಳು ಸಿಕ್ಕಿವೆ. ನಮ್ಮ ಕಾಯಕದಲ್ಲಿ ನಾವು ಎಚ್ಚರಿಕೆಯಿಂದ ತಲ್ಲೀನರಾಗಿರಬೇಕು. ನಮ್ಮ ಮಾತುಗಳು ಪ್ರಜ್ಞಾಪೂರ್ಣವಾಗಿರಬೇಕು. ನಮ್ಮ ಸಂಬಂಧಗಳು ವ್ರತನಿಷ್ಠರ ಜೊತೆ ಇರಬೇಕು. ಇಲ್ಲದಿದ್ದರೆ ನಮಗೆ ನರಕವೇ ಗತಿ. ಹೀಗೆ ಕಾಯಕನಿಷ್ಠೆ, ಲೋಕದ ಜನರ ಜೊತೆ ಹಿತಮಿತ ಮತ್ತು ಮೃದುತ್ವದಿಂದ ಕೂಡಿದ ಮಾತುಕತೆ ಹಾಗೂ ವ್ರತನಿಷ್ಠೆಯುಳ್ಳವರ ಜೊತೆಗೂಡಿ ಬದುಕುವುದರ ಮೂಲಕ ನೆಮ್ಮದಿ ಎಂಬ ಸ್ವರ್ಗಸುಖ ಅನುಭವಿಸುವುದರ ಕುರಿತು ಕಾಳವ್ವೆ ತಿಳಿಸುತ್ತಾಳೆ.
ಕಾಯಕದ ಅನುಭವದಿಂದಲೇ ಆಕೆ ಲೋಕಜ್ಞಾನ ಸಂಪಾದಿಸಿದ್ದಾಳೆ. ಆ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಶ್ಯವಾಗಿ ಬೇಕಾಗಿರುವಂಥ ನಿಷ್ಠೆಯಿಂದ ಕೂಡಿದ ಕಾಯಕ, ಎಚ್ಚರಿಕೆಯಿಂದ ಕೂಡಿದ ಮಾತುಕತೆ ಮತ್ತು ಘನತೆಯಿಂದ ಕೂಡಿದ ಮಾನವ ಸಂಬಂಧಗಳ ಕುರಿತು ತಿಳಿಸುವ ಅವಳ ಸರಳ ಕ್ರಮವು ಆಳವಾದ ಚಿಂತನೆಗೆ ಹಚ್ಚುವಲ್ಲಿ ಸಫಲವಾಗುತ್ತದೆ. ನಾವು ಹೇಗೆ ಕಾಯಕ ಮಾಡಬೇಕು, ಯಾರ ಜೊತೆ ಹೇಗೆ ಮಾತನಾಡಬೇಕು ಮತ್ತು ಎಂಥವರ ಜೊತೆ ಬೆರೆಯಬೇಕು ಎಂಬುದರ ಬಗ್ಗೆ ಕಾಳವ್ವೆ ನಿಖರವಾಗಿ ಹೇಳಿದ್ದಾಳೆ. ವೈಶಿಷ್ಟ್ಯವೆಂದರೆ ಈಕೆ ಎಲ್ಲಿಯೂ ಧರ್ಮ, ಇಷ್ಟಲಿಂಗ, ಧಾರ್ಮಿಕ ಆಚರಣೆ, ತತ್ತ್ವಜ್ಞಾನ, ಆತ್ಮಜ್ಞಾನ, ಅನುಭಾವ ಮುಂತಾದ ದೊಡ್ಡದೊಡ್ಡ ಮಾತುಗಳನ್ನು ಆಡುವುದೇ ಇಲ್ಲ. ಆದರೆ ಇವೆಲ್ಲವನ್ನು ಅರಿತುಕೊಳ್ಳಲು ಬೇಕಾಗುವಂಥ ವ್ಯಕ್ತಿತ್ವದ ವಿಕಸನದ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದಾಳೆ. ವ್ಯಕ್ತಿತ್ವ ವಿಕಸನವಿಲ್ಲದೆ ಯಾವುದೇ ಧರ್ಮ ಅಥವಾ ತತ್ವವನ್ನು ಉಳಿಸಿಕೊಳ್ಳಲಿಕ್ಕಾಗದು ಎಂಬುದು ಆಕೆಯ ದೃಢನಿಲುವಾಗಿದೆ. ಅಂತೆಯೆ ಇನ್ನೊಂದು ವಚನದಲ್ಲಿ ‘‘ಕಾಯಕ ತಪ್ಪಿದಡೆ ಸೈರಿಸಬಾರದು; ವ್ರತ ತಪ್ಪಲೆಂತೂ ಸೈರಿಸಬಾರದು’’ ಎಂದು ಅವಳು ಸ್ಪಷ್ಟಪಡಿಸಿದ್ದಾಳೆ.
ಅವಳ ಎಚ್ಚರಿಕೆಯ ಮಾತುಗಳು ಇಂದಿನ ದುರಂತ ಸಮಾಜಕ್ಕೆ ಕನ್ನಡಿ ಹಿಡಿದಂತಿವೆ. ಕಾಯಕ ಪ್ರಜ್ಞೆಯನ್ನು ಕಳೆದುಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲ ರಂಗಗಳಲ್ಲಿಯೂ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ವಿವಿಧ ಧರ್ಮಗಳ ಹೆಸರಿನಲ್ಲಿ ಗೊಂದಲದ ಮಾತುಗಳನ್ನಾಡುವವರು ಹೆಚ್ಚಾಗುತ್ತಿರುವುದರಿಂದ ಕೋಮುಗಲಭೆಗಳು ಮತ್ತು ಜಾತಿಸಂಘರ್ಷಗಳು ಹಬ್ಬುತ್ತಿವೆ. ಮೌಲ್ಯನಿಷ್ಠೆ ಕುಂಠಿತಗೊಳ್ಳುತ್ತಿರುವುದರಿಂದ ಸಮಾಜವು ಅನೈತಿಕ ವ್ಯಕ್ತಿಗಳ ಹಿಡಿತದಲ್ಲಿ ಸಿಕ್ಕಿ ಅಧೋಗತಿಗೆ ಇಳಿಯುತ್ತಿದೆ. ಈ ಕಾರಣದಿಂದಲೇ ವಿಶ್ವದಲ್ಲಿ ಹಿಮ್ಮುಖ ಅಭಿವೃದ್ಧಿ ಆಗುತ್ತಿದೆ. ಇದಕ್ಕೆ ಅಧೋನ್ನತಿ ಎನ್ನುತ್ತಾರೆ. ಅಂತೆಯೆ ಕಾಳವ್ವೆ ವ್ರತಕ್ಕೆ ಬಹಳಷ್ಟು ಮಹತ್ವ ಕೊಡುತ್ತಾಳೆ. ವ್ರತವೆಂದರೆ ಮೇಲೆ ಮೇಲೆ ಏರುತ್ತ ಒಳಗಣ್ಣುಗಳಿಂದ ದೇವರನ್ನು ಕಾಣಲು ಬೇಕಾದ ಏಣಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X