ಕೊಳ್ಳೇಗಾಲ: ನೇಣು ಬಿಗಿದು ಬಸ್ ಚಾಲಕ ಆತ್ಮಹತ್ಯೆ
ಕೊಳ್ಳೇಗಾಲ,ಆ.4: ಜೀವನದಲ್ಲಿ ಜಿಗುಪ್ಸೆಗೊಂಡು ಖಾಸಗಿ ಬಸ್ ಚಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಪಟ್ಟಣದ ನಂಜಯ್ಯನಕಟ್ಟೆ ಬಡಾವಣೆಯ ಬಳಿ ನಡೆದಿದೆ.
ತಾಲೂಕಿನ ಕಾಮಗೆರೆ ಮೂಲದ ರವಿ(37) ಎಂಬವರು ಪಟ್ಟಣದ ನಂಜಯ್ಯನಕಟ್ಟೆ ಬಡಾವಣೆಯಲ್ಲಿ ವಾಸವಿದ್ದ ತನ್ನ ಮನೆಯಲ್ಲಿ, ಜೀವನದಲ್ಲಿ ಯಾವುದೋ ಕಾರಣಕ್ಕೆ ಬೇಸತ್ತು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಪುಟ್ಟಮಾದಯ್ಯ, ಸಿಪಿಐ ಡಿ.ಜಿ.ರಾಜಣ್ಣ, ಎಸ್ಐ ವೀಣಾನಾಯಕ್ ಭೇಟಿ ನೀಡಿದರು. ಮೃತನ ಪತ್ನಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಲಾಗಿದೆ. ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿ ನಂತರ ಶವವನ್ನು ದೂರುದಾರರಿಗೆ ನೀಡಲಾಯಿತು.
Next Story