ಡೆನ್ಮಾರ್ಕ್: ಬುರ್ಖಾ ನಿಷೇಧ ಉಲ್ಲಂಘನೆಗಾಗಿ ಮೊದಲ ದಂಡ

ಕೋಪನ್‌ಹೇಗನ್ (ಡೆನ್ಮಾರ್ಕ್), ಆ. 4: ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ನಿಷೇಧ ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ಡೆನ್ಮಾರ್ಕ್‌ನಲ್ಲಿ ಮೊದಲ ದಂಡವನ್ನು ಶುಕ್ರವಾರ ಮಹಿಳೆಯೊಬ್ಬರ ಮೇಲೆ ವಿಧಿಸಲಾಯಿತು.
ಈಶಾನ್ಯ ಡೆನ್ಮಾರ್ಕ್‌ನ ನಾರ್ಡ್ಸ್‌ಜೇಲಂಡ್‌ನ ಹೊರ್‌ಶೊಲ್ಮ್‌ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದಕ್ಕೆ ಪೊಲೀಸರನ್ನು ಕರೆಸಲಾಯಿತು. ಅಲ್ಲಿ ಬುರ್ಖಾ ಧರಿಸಿದ ಮಹಿಳೆಯ ಬುರ್ಖಾವನ್ನು ಇನ್ನೊಂದು ಮಹಿಳೆಯು ಹರಿಯಲು ಪ್ರಯತ್ನಿಸಿದಾಗ ಅವರ ನಡುವೆ ಜಗಳ ಏರ್ಪಟ್ಟಿತ್ತು.
ಜಗಳ ಬಿಡಿಸಿದ ಪೊಲೀಸರು ಬುರ್ಖಾಧಾರಿ ಮಹಿಳೆಗೆ 1,000 ಕ್ರೋನರ್ (ಸುಮಾರು 10,600 ರೂಪಾಯಿ) ದಂಡ ವಿಧಿಸಿದರು ಹಾಗೂ ಸಾರ್ವಜನಿಕ ಸ್ಥಳದಿಂದ ಹೋಗುವಂತೆ ಸೂಚಿಸಿದರು.
Next Story





