ಉಡುಪಿ: ಮಿಲಾಗ್ರಿಸ್ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟನೆ

ಉಡುಪಿ, ಆ.4: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಾಹಿತ್ಯ ಸಂಘದ ಚಟುವಟಿಕೆಗಳಿಗೆ ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಇತ್ತೀಚೆಗೆ ಚಾಲನೆ ನೀಡಿದರು.
ಕಲ್ಪನಾ ಶಕ್ತಿ ಮತ್ತು ಕ್ರಿಯಾಶಕ್ತಿಯ ಮೂಲಕ ವಿದ್ಯಾಥಿಗಳು ಕಾರ್ಯ ಪ್ರವೃತ್ತರಾಗುವುದು ಅಗತ್ಯ. ಆಧುನಿಕ ಮಾಧ್ಯಮಗಳ ಕಡೆಗೆ ಹೆಚ್ಚು ಆಕರ್ಷಿತ ರಾಗದೆ ಸಾಹಿತ್ಯವನ್ನು ಓದುವ ಮತ್ತು ಬರೆಯುವ ಹವ್ಯಾಸಗಳ ಕಡೆಗೆ ಗಮನ ಕೊಡಬೇಕು. ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಂತಾಗಬೇಕೆ ಹೊರತು ಭತ್ತ ತುಂಬುವ ಗೋಣಿಗಳಾಗಬಾರದು ಎಂದು ವಿಶ್ವನಾಥ ಕರಬ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಸೋಫಿಯಾ ಡಯಾಸ್, ಆಂಗ್ಲ ಭಾಷಾ ಉಪನ್ಯಾಸಕಿ ಚಂದ್ರಿಕಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ಮಿತಾ ಪಿಂಟೋ, ಸಿಸ್ಟರ್ ಡೆಲ್ಸಿನಾ ಹಾಗೂ ಅಶ್ಮಿತಾ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ಸಂಯೋಜಕಿ ಹರಿಣಾಕ್ಷಿ ಎಂ.ಡಿ ಪ್ರಾಸ್ತಾವಿಕವಾಗಿ ಮಾತ ನಾಡಿ ಸ್ವಾಗತಿಸಿದರು. ನಾಗರಾಜ ವಂದಿಸಿದರು. ಮೆಲಿಶಾ ಡಿಸೋಜ ಕಾರ್ಯ ಕ್ರಮ ನಿರೂಪಿಸಿದರು.





