Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿಯಲ್ಲಿ ಬೂದಿ ಮಿಶ್ರಿತ ಮಳೆ: ಕೇಂದ್ರ...

ಉಡುಪಿಯಲ್ಲಿ ಬೂದಿ ಮಿಶ್ರಿತ ಮಳೆ: ಕೇಂದ್ರ ಪರಿಸರ ಇಲಾಖೆಗೆ ಸಾರ್ವಜನಿಕರ ದೂರು ಅರ್ಜಿ

ವಾರ್ತಾಭಾರತಿವಾರ್ತಾಭಾರತಿ4 Aug 2018 9:09 PM IST
share
ಉಡುಪಿಯಲ್ಲಿ ಬೂದಿ ಮಿಶ್ರಿತ ಮಳೆ: ಕೇಂದ್ರ ಪರಿಸರ ಇಲಾಖೆಗೆ ಸಾರ್ವಜನಿಕರ ದೂರು ಅರ್ಜಿ

ಉಡುಪಿ, ಆ.4: ಉಡುಪಿ ನಗರ ಹಾಗೂ ಜಿಲ್ಲೆಯ ಅನೇಕ ಕಡೆಗಳಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಸುರಿದ ಬೂದಿ ಮಿಶ್ರಿತ ಅಸಹಜ ಮಳೆ ಮುಂಬರುವ ದಿನಗಳ ಅಪಾಯದ ಮುನ್ಸೂಚನೆಯಾಗಿ ಹಲವರಿಗೆ ಕಂಡಿದ್ದು, ಈ ಕುರಿತಂತೆ ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆಗೆ ಲಿಖಿತ ದೂರೊಂದನ್ನು ಈಮೇಲ್ ಮೂಲಕ ಕಳುಹಿಸಲಾಗಿದೆ. 

ಇದರ ಜೊತೆಜೊತೆಗೆ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿ ಕೇಂದ್ರ ಪರಿಸರ ಇಲಾಖೆಗೂ ಸಾರ್ವಜನಿಕ ದೂರು ಅರ್ಜಿಯೊಂದನ್ನು ಪರಿಸರಾಸಕ್ತರು ಸಿದ್ಧಪಡಿಸಿದ್ದು ಅದನ್ನು ಕಳುಹಿಸಿಕೊಡುವ ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ಈ ಮಳೆಗೆ ನಿಜವಾದ ಕಾರಣವನ್ನು ಪತ್ತೆ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದು, ಪರಿಸರಾಸಕ್ತ 9 0ಕ್ಕೂ ಅಧಿಕ ಮಂದಿ ಈಗಾಗಲೇ ಈ ಅರ್ಜಿಗೆ ಸಹಿಯನ್ನೂ ಮಾಡಿದ್ದಾರೆ.

ಅರ್ಜಿಯ ವಿವರ: ಶುಕ್ರವಾರ ಸಂಜೆ ಸುರಿದ ಅಸಹಜ ಮಳೆಯಿಂದ ನಗರದೊಳಗೆ ನಿಲ್ಲಿಸಿದ ವಾಹನಗಳು, ಗಿಡಮರಗಳ ಮೇಲೆಲ್ಲಾ ಬಿಳಿಹುಡಿಯಂಥ ವಸ್ತು ಸಂಗ್ರಹವಾಗಿದ್ದು, ಇದು ರುಚಿಯಲ್ಲಿ ಉಪ್ಪಾಗಿದ್ದು, ಕಟುವಾದ ವಾಸನೆಯನ್ನು ಹೊಂದಿತ್ತು. ಶನಿವಾರದ ಪತ್ರಿಕೆಗಳು ಈ ವಸ್ತು ನಂದಿಕೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಬೀಳುವ ಹಾರುಬೂದಿಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಜನರಿಂದ ದೂರು ಬಂದರೆ ಮಾತ್ರ ನಾವು ಮಳೆ ನೀರು ಹಾಗೂ ವಸ್ತುವಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸು ವುದಾಗಿ ಸ್ಥಳೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪತ್ರಿಕೆಗಳಿಗೆ ತಿಳಿಸಿರುವುದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಅವರಿಗೆ ಮಾಹಿತಿ ಸಿಕ್ಕಿದಾಕ್ಷಣ ವಾಹನಗಳ ಮೇಲಿದ್ದ ವಸ್ತುಗಳ ಸ್ಯಾಂಪಲ್‌ನ್ನು ಸಂಗ್ರಹಿಸಬೇಕಾಗಿತ್ತು. ಮಳೆ ನೀರು ಹಾಗೂ ಅದರೊಂದಿಗೆ ಬಂದ ವಸ್ತು, ಅಧಿಕಾರಿಗಳು ಬರುವ ತನಕ ಕಾಯುವುದಿಲ್ಲ. ಈವರೆಗೆ ಅಧಿಕಾರಿಗಳು ಇದರ ಸ್ಯಾಂಪಲ್ ಸಂಗ್ರಹಿಸದೇ ಇದ್ದರೆ ಈ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತೇವೆ. 

ತಾವು ಮಾಲಿನ್ಯಕಾರವಾದ ಯಾವುದೇ ವಸ್ತುಗಳನ್ನು ಪರಿಸರಕ್ಕೆ ಬಿಡುತ್ತಿಲ್ಲ ಎಂದು ಯುಪಿಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಹೇಳಿರುವುದು ನಿಜವಲ್ಲ. ಕಂಪೆನಿಯೇ ನಿಮಗೆ (ಕೇಂದ್ರ ಪರಿಸರ ಇಲಾಖೆ) ನೀಡಿರುವ ವರದಿಯಲ್ಲಿ ಅನುಮತಿ ಇರುವ ಮಟ್ಟದ ಹಾರುಬೂದಿಯನ್ನು ನಾವು ಪರಿಸರಕ್ಕೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕ್ಷಣಕ್ಕೆ ಅವರು ತೋರಿಸುತ್ತಿರುವ ಯುಪಿಸಿಎಲ್ ಸ್ಥಾವರದ ಪರಿಸರ ಪ್ಯಾರಾಮೀಟರ್‌ಗಳು ಅವರ ವಾರ್ಷಿಕ ಸರಾಸರಿಗಿಂತ ತುಂಬಾ ಅಧಿಕ ಪ್ರಮಾಣದಲ್ಲಿ ಹಾರುಬೂದಿ ವಾತಾವರಣಕ್ಕೆ ಸೇರುತ್ತಿರುವುದನ್ನು ವಿವರಿಸುತ್ತಿವೆ. ತಾವು ಮಾಲಿನ್ಯಕಾರವಾದ ಯಾವುದೇ ವಸ್ತುಗಳನ್ನು ಪರಿಸರಕ್ಕೆ ಬಿಡುತ್ತಿಲ್ಲ ಎಂದು ಯುಪಿಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಆದರೆ ಅವರು ಹೇಳಿರುವುದು ನಿಜವಲ್ಲ. ಕಂಪೆನಿಯೇ ನಿಮಗೆ (ಕೇಂದ್ರ ಪರಿಸರ ಇಲಾಖೆ) ನೀಡಿರುವ ವರದಿಯಲ್ಲಿ ಅನುಮತಿ ಇರುವ ಮಟ್ಟದ ಹಾರುಬೂದಿಯನ್ನು ನಾವು ಪರಿಸರಕ್ಕೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕ್ಷಣಕ್ಕೆ ಅವರು ತೋರಿಸುತ್ತಿರುವ ಯುಪಿಸಿಎಲ್ ಸ್ಥಾವರದ ಪರಿಸರ ಪ್ಯಾರಾಮೀಟರ್‌ಗಳು ಅವರ ವಾರ್ಷಿಕ ಸರಾಸರಿಗಿಂತ ತುಂಬಾ ಅಧಿಕ ಪ್ರಮಾಣದಲ್ಲಿ ಹಾರುಬೂದಿ ವಾತಾವರಣಕ್ಕೆ ಸೇರುತ್ತಿರುವುದನ್ನು ವಿವರಿಸುತ್ತಿವೆ. ಈ ಎಲ್ಲಾ ಕಾರಣಗಳಿಗಾಗಿ ಈ ಬಗ್ಗೆ ತಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಹಾಗೂ ಉಡುಪಿಯ ನಾಗರಿಕರಿಗೆ ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಪರಿಸರದ ಭರವಸೆಯನ್ನು ನೀಡಬೇಕೆಂದು ಕೋರುತ್ತೇವೆ ಎಂದು ಕೇಂದ್ರ ಪರಿಸರ ಇಲಾಖೆಗೆ ಸಲ್ಲಿಸಲು ಸಿದ್ಜಪಡಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X